ಕಾಸರಗೋಡು: ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ ಮಂಜೂರು ಮಾಡಲಾದ ವಿಶೇಷಚೇತನರಿಗಿರುವ ವಿದ್ಯುನ್ಮಾನ ತ್ರಿಚಕ್ರ ವಾಹನಗಳ ವಿತರಭೆ ಜರುಗಿತು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ವಿತರಣೆಗೆ ಚಾಲನೆ ನೀಡಿದರು. ಎಂಡೋಸಲ್ಫಾನ್ ಘಟಕದ ಸಹಾಯಕ ಜಿಲ್ಲಾಧಿಕಾರಿ ಎಸ್.ಸಜಿದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಾಜ ನೀತಿ ಅಧಿಕಾರಿ ಷೀಬಾ ಮುಂತಾಝ್, ಜ್ಯೂನಿಯರ್ ಸುಪರಿಂಡೆಂಟ್ ಅಬ್ದುಲ್ಲ ಎಂ. ಜಿಲ್ಲಾ ಯೋಜನೆ ಕಚೇರಿಯ ರೀಸರ್ಚ್ ಅಸಿಸ್ಟೆಂಟ್ ಸ್ಮಿತಾ ಬೇಬಿ ಉಪಸ್ಥಿತರಿದ್ದರು.