ತಿರುವನಂತಪುರ: ಕೆಎಸ್‍ಆರ್‍ಟಿಸಿ ವೇತನ ಪರಿಷ್ಕರಣೆ ಸಂಬಂಧ ಕಾರ್ಮಿಕ ಸಂಘಟನೆಗಳ ಜತೆ ಸಾರಿಗೆ ಸಚಿವ ಆಂಟನಿ ರಾಜು ನಡೆಸಿದ ಮಾತುಕತೆ ವಿಫಲವಾಗಿದೆ. ವೇತನ ಪರಿಷ್ಕರಣೆಯಲ್ಲಿ ಕಾರ್ಮಿಕರು ಎತ್ತಿದ್ದ ಬೇಡಿಕೆಗಳು ಇತ್ಯರ್ಥವಾಗಿಲ್ಲ. ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಷ್ಕರ ನಡೆಸುವುದಾಗಿ ಬಿಎಂಎಸ್ ಹೇಳಿದೆ.
ಸದ್ಯ ಕೆಎಸ್‍ಆರ್‍ಟಿಸಿಗೆ ಸರ್ಕಾರ ನೀಡುತ್ತಿರುವ ನೆರವು 150 ಕೋಟಿ ಆಗಿದ್ದು, ಕಾರ್ಮಿಕರ ಬೇಡಿಕೆಯನ್ನು ಪರಿಗಣಿಸಿ 180 ಕೋಟಿ ರೂ.ನೀಡಲಿದೆ. ಶಾಲೆಗಳ ಆರಂಭ ಹಾಗೂ ಶಬರಿಮಲೆ ಯಾತ್ರೆ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆಯಬೇಕು ಎಂದು ಸಚಿವರು ಒತ್ತಾಯಿಸಿದರು. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿ ಸಚಿವರು ತಿಳಿಸಿದರು. ಸಂಘಗಳಿಗೆ ಬೇರೆ ಹಿತಾಸಕ್ತಿಗಳಿವೆ ಎಂದು ಸಚಿವರು ಆರೋಪಿಸಿದರು.
ಶುಕ್ರವಾರ ಮತ್ತು ಶನಿವಾರ ಮುಷ್ಕರ ನಡೆಸಲು ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ. ಇಂದು ಮಧ್ಯರಾತ್ರಿಯಿಂದ ಮುಷ್ಕರ ಆರಂಭವಾಗಲಿದೆ.
ವೇತನ ಪರಿಷ್ಕರಣೆ ಜಾರಿಗೆ ತರಲು ಮತ್ತೊಮ್ಮೆ ಹಣಕಾಸು ಸಚಿವರನ್ನು ಭೇಟಿ ಮಾಡುವುದಾಗಿ ಸಾರಿಗೆ ಸಚಿವರು ಸಂಘಗಳಿಗೆ ತಿಳಿಸಿದರು. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸಂಘಗಳ ಜತೆ ಈ ಹಿಂದೆ ನಡೆಸಿದ ಎರಡು ಸುತ್ತಿನ ಮಾತುಕತೆಯೂ ವಿಫಲವಾಗಿತ್ತು.