ತಲಪಾಡಿ: ಕೊರೋನ ಎರಡನೇ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ಸುಧೀರ್ಘ ಅವಧಿಯಿಂದ ಮುಚ್ಚಲಾಗಿದ್ದ ಕೇರಳ- ಕರ್ನಾಟಕ ಗಡಿಗಳು ಮತ್ತೆ ಸಂಚಾರ ಮುಕ್ತವಾಗಿದ್ದು, ಇಂದಿನಿಂದ ಮಂಗಳೂರು ಕಾಸರಗೋಡು ಬಸ್ ಸೇವೆ ಸಹಿತ ಎಲ್ಲಾ ಗಡಿಗಳಲ್ಲಿ ಸಂಚಾರ ಪುನರಾರಂಭಗೊಂಡಿದೆ.
ಕೇರಳದಲ್ಲಿ ಕೊರೋನ ಇಳಿಮುಖವಾದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವೇಶಕ್ಕೆ RTPCR ನೆಗೆಟಿವ್ ಇಲ್ಲದೆಯೆ ಹೋಗಬಹುದು. ಕಾಸರಗೋಡಿನ ಬಹುಸಂಖ್ಯೆಯ ಜನರು ಉದ್ಯೋಗ, ವೈದ್ಯಕೀಯ ಚಿಕಿತ್ಸೆ ಹಾಗೂ ವಿದ್ಯಾಭ್ಯಾಸಕ್ಕೆ ಹೆಚ್ಚಾಗಿ ಮಂಗಳೂರನ್ನು ಅವಲಂಬಿಸಿ ಇರುವ ಕಾರಣ ಈ ಬಸ್ ಆರಂಭದಿಂದ ಕಾಸರಗೋಡಿಗರಿಗೆ ಸಾಕಷ್ಟು ಅನುಕೂಲ ಆಗಲಿದೆ.
ಕಾಸರಗೋಡು-ಮಂಗಳೂರು, ಕಾಸರಗೋಡು- ಬದಿಯಡ್ಕ- ಅಡ್ಕಸ್ಥಳ- ಪುತ್ತೂರು, ಕಾಸರಗೋಡು-ಚೆರ್ಕಳ- ಜಾಲ್ಸೂರು, ಕಾಞಂಗಾಡ್- ಕುಟ್ಟ- ಮಡಿಕೇರಿ ಬಸ್ ಸಂಚಾರ ಆರಂಭಗೊಂಡಿದೆ.
ಕಾಸರಗೋಡು ಪ್ರಯಾಣಿಕರ ತಂಡ ಸಹಯಾತ್ರಿ ಕರ್ನಾಟಕ ಸರಕಾರದ ಹಾಗೂ ದಕ್ಷಿಕ ಕನ್ನಡ ಜಿಲ್ಲಾಡಳಿತದ ಈ ನಿರ್ಧಾರವನ್ನು ಸ್ವಾಗತಿಸಿದೆ.