ಕಾಸರಗೋಡು: ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅವರ ಪ್ರಾದೇಶಿಕ ಅಭಿವೃದ್ಧಿ ಮೊಬಲಗು ಬಳಸಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಖರೀದಿಸಿದ ಆಂಬುಲೆನ್ಸ್ ವಾಹನ ಸೇರಿದಂತೆ ವಿವಿಧ ಸವಲತ್ತುಗಳ ಉದ್ಘಾಟನಾ ಸಮಾರಂಭ ಪಯ್ಯನ್ನೂರಿನ ತಾಲೂಕು ಕಚೇರಿ ಸನಿಹ ಜರುಗಿತುಕಾಸರಗೋಡು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನ ಅಂಗವೈಕಲ್ಯ ಹೊಂದಿದ ಮಕ್ಕಳಿಗೆ ತ್ರಿಚಕ್ರ ವಾಹನ ವಿತರಿಸಿದರು.
ಕಾಸರಗೋಡು ಜನರಲ್ ಆಸ್ಪತ್ರೆ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಧ್ವಜ ಬೀಸಿ ನೂತನ ಆಂಬುಲೆನ್ಸ್ ವಾಹನಕ್ಕೆ ಚಾಲನೆ ನೀಡಿದರು. ಒಟ್ಟು 14.88ಲಕ್ಷ ರೂ. ಮೊತ್ತ ಬಳಸಿ ಆಂಬುಲೆನ್ಸ್ ಖರೀದಿಸಲಾಗಿದೆ. ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಆರ್.ಡಿ.ಓ ಅತುಲ್ ಎಸ್. ನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಗರಸಭಾ ಸ್ಥಾಯೀ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್, ಶ್ರೀಲತಾ ಟೀಚರ್, ಮಹಮ್ಮದ್ ಸಾಲಿ, ಕರುಣ್ ಥಾಪ, ಖಲೀಲ್ ಎರಿಯಾಲ್, ಸನ್ನಿ ಅರಮನ ಉಪಸ್ಥಿತರಿದ್ದರು.