ಬದಿಯಡ್ಕ: ಉದ್ಘಾಟನೆಗೆ ಸಿದ್ಧವಾಗಿರುವ ಅಗಲ್ಪಾಡಿ ಜಯನಗರ ಮಾರ್ಪನಡ್ಕದಲ್ಲಿರುವ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಭೋಜನ ಶಾಲೆ ಮತ್ತು ಸಭಾ ಭವನಕ್ಕೆ ನಾಯ್ಕಾಪು ಮುಂಡಪಳ್ಳ ದರ್ಬಾರ್‍ಕಟ್ಟೆಯ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಬುಧವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಅರ್ಪಣಾ ಭಾವದಿಂದ ಕೆಲಸ ಮಾಡಿದರೆ ಯಾವುದೂ ಕಷ್ಟ ಸಾದ್ಯವಲ್ಲ, ಸಮಾಜದ ಸ್ವಾಸ್ಥ್ಯ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಂದ ಮಾತ್ರ ಸಾಧ್ಯ, ಆದ್ದರಿಂದ ಇಂತಹ ಶ್ರದ್ಧಾ ಕೇಂದ್ರಗಳಲ್ಲಿ ಧಾರ್ಮಿಕ ಪ್ರಜ್ಞೆಯಿಂದ ಊರಿನ ಜನರು ಹೆಚ್ಚಿನ ಆಸಕ್ತಿಯನ್ನು ವಹಿಸಿ ಕೆಲಸಗಳು ನಿರಂತರವಾಗಿ ನಡೆಯುತ್ತಿರುವಂತೆ ನೋಡಿಕೊಳ್ಳಬೇಕು ಎಂದು ಕರೆಯಿತ್ತರು.
ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಅಧ್ಯಕ್ಷ ಮಂಜುನಾಥ ಆಳ್ವ, ಜಯಪ್ರಕಾಶ್ ಆಳ್ವ, ಶ್ರೀಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ, ಗೌರವಾಧ್ಯಕ್ಷೆ ವಸಂತಿ ಟೀಚರ್ ಅಗಲ್ಪಾಡಿ, ಜನಾರ್ದನ ಮಣಿಯಾಣಿ ಬೆದ್ರುಕೂಡ್ಲು, ಅಚ್ಚುತ ಮಾಸ್ತರ್ ಅಗಲ್ಪಾಡಿ, ಸುಧಾಮ ಪದ್ಮಾರ್, ರವೀಂದ್ರ ಜಯನಗರ, ಬಾಲಕೃಷ್ಣ ನಾರ0ಪಾಡಿ, ಶ್ರೀಧರ್ ಪದ್ಮಾರ್, ಗಿರೀಶ್ ಅಗಲ್ಪಾಡಿ, ಚಂದ್ರ ಪದ್ಮಾರ್, ನಾರಾಯಣ ಪದ್ಮಾರ್, ಸತ್ಯನಾರಾಯಣ ಅಗಲ್ಪಾಡಿ, ಜಯಪ್ರಕಾಶ್ ಬೆದ್ರುಕೂಡ್ಲು ಉಪಸ್ಥಿತರಿದ್ದರು. ಪ್ರೊ.ಎ. ಶ್ರೀನಾಥ್ ಸ್ವಾಗತಿಸಿ, ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಪ್ರಧಾನ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರ್ ವಂದಿಸಿದರು. ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ ನಿರೂಪಿಸಿದರು.