ಮಂಜೇಶ್ವರ:ಸರ್ಕಾ|ರಿ ಪ್ರೌಢಶಾಲೆ ಕಡಂಬಾರು ಇಲ್ಲಿ ನವಾಗತರಾಗಿ ಆಗಮಿಸಿದ ಮಕ್ಕಳ ಪ್ರವೇಶೋತ್ಸವ ಕಾರ್ಯಕ್ರಮ ಸೋಮವಾರ ಜರುಗಿತು.
ಒಂದನೇ ತರಗತಿಗೆ ಸೇರ್ಪಡೆಗೊಂಡ ಮಕ್ಕಳಿಗೆ ಕಲಿಕೋಪಕರಣ ಗಳನ್ನು ನೀಡಿ ಸ್ವಾಗತಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತಾ ಕೆ ಬಿ ಅವರು ವಹಿಸಿದ್ದರು. ಮಿಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು.
ಸಭೆಯಲ್ಲಿ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ರಾಮಚಂದ್ರ ರಾವ್ ರವರ ನೇತೃತ್ವದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು. ಹರೀಶ್ ಶೆಟ್ಟಿ ಕಡಂಬಾರು ಹಾಗೂ ಸಂಘ-ಸಂಸ್ಥೆಯವರ ವತಿಯಿಂದ ಒಂದನೇ ತರಗತಿಗೆ ಸೇರ್ಪಡೆಗೊಂಡ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ನೀಡಲಾಯಿತು. ಸಭೆಯಲ್ಲಿ ಮುಸ್ತಫ ಕಡಂಬಾರು, ಪಿ ಟಿ ಎ ಅಧ್ಯಕ್ಷ ಅಬ್ದುಲ್ ಲತೀಫ್, ಮಾತೃಸಂಘದ ಅಧ್ಯಕ್ಷೆ ರುಕ್ಸಾನ, ಬಿ ಆರ್ ಸಿ ವಿಭಾಗ ಸಂಯೋಜಕಿ ಮೋಹಿನಿ ಯಂ ಎಚ್, ಯದುನಂದನ್ ಆಚಾರ್ಯ, ಸೌರ ಕಡಂಬಾರು, ಪಿಟಿಎ ಉಪಾಧ್ಯಕ್ಷ ಮೊದೀನ್ ಕುಂಞÂ್ಞ, ನಿವೃತ್ತ ಅಧ್ಯಾಪಕ ವಿಜಯ ಕುಮಾರ್, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಶಾಲಾ ನೌಕರ ಸಂಘದ ಕಾರ್ಯದರ್ಶಿ ಇಸ್ಮಾಯಿಲ್ ಎಂ ಸ್ವಾಗತಿಸಿ, ಹಿರಿಯ ಅಧ್ಯಾಪಕ ಮೂಸ ಕುಂಞ ಡಿ ವಂದಿಸಿದರು.