ಕಾಸರಗೋಡು: ಹೋಟೆಲ್ ಮತ್ತು ರೆಸ್ಟಾರೆಂಟ್ ಕಾಸರಗೋಡು ಜಿಲ್ಲಾ ಸಮಿತಿ ಸಮ್ಮೇಳನ ನ. 24ರಂದು ಕಾಸರಗೋಡು ಬ್ಯಾಂಕ್ ರಸ್ತೆಯ ಕೇರಳ ಹೋಟೆಲ್ ಏಂಡ್ ರೆಸ್ಟಾರೆಂಟ್ ಅಸೋಸಿಯೇಶನ್(ಕೆಎಚ್‍ಆರ್‍ಎ)ಭವನದಲ್ಲಿ ಜರುಗಲಿರುವುದಾಗಿ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ದುಲ್ಲ ತಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾಳೆ ಬೆಳಗ್ಗೆ 10ಕ್ಕೆ ಧ್ವಜಾರೋಹಣ, ಆಹಾರ ಸುರಕ್ಷಾ ಇಲಾಖೆ ಸಹಕಾರದೊಂದಿಗೆ ಹೋಟೆಲ್ ಮಾಲಿಕರಿಗಾಗಿ ಆಹಾರ ಸುರಕ್ಷಾ ಕಾನೂನಿನ ಬಗ್ಗೆ ಕಾರ್ಯಾಗಾರ ನಡೆಯುವುದು. ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಜಿ.ಕೆ ಪ್ರಕಾಶ್ ಉದ್ಘಾಟಿಸುವರು. ಜಿಲ್ಲಾ ಆಹಾರ ಸುರಕ್ಷಾ ಅಧಿಕಾರಿ ಹೇಮಾಂಬಿಕಾ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಧ್ಯಾಹ್ನ 2.30ಕ್ಕೆ ಪ್ರತಿನಿಧಿ ಸಮ್ಮೇಳನ, 3ಕ್ಕೆ ಜಿಲ್ಲಾ ಸಮ್ಮೇಳನ ನಡೆಯುವುದು. ರಾಜ್ಯ ಸಮಿತಿ ಕೋಶಾಧಿಕಾರಿ ಬಾಲಕೃಷ್ಣನ್ ಪೊದುವಾಳ್ ಉದ್ಘಾಟಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ನಾರಾಯಣ ಪೂಜಾರಿ, ರಾಜನ್ ಕಳಕ್ಕರ, ಐಡಿಯಲ್ ಮಹಮ್ಮದ್, ಕೆ. ವಸಂತ ಕುಮಾರ್, ರಾಜೇಶ್ ಡಿ ಉಪಸ್ಥೀತರಿದ್ದರು.