HEALTH TIPS

ಕನ್ನಡಿಪಾರೆ ಭಜನಾ ಮಂದಿರದ ಲಕ್ಕಿಡಿಪ್ ಕೂಪನ್ ಎಡನೀರು ಶ್ರೀಗಳಿಂದ ಬಿಡುಗಡೆ

                    ಬದಿಯಡ್ಕ: ಪಾಡಿ ಗ್ರಾಮದ ಎಡನೀರು ಶ್ರೀ ಮಠದ ಅಧೀನದಲ್ಲಿರುವ ಎದುರ್ತೋಡು  ಕನ್ನಡಿ ಪಾರೆಯ ಶ್ರೀಧರ್ಮಶಾಸ್ತಾ ಭಜನಾ ಮಂದಿರದ ಕಟ್ಟಡದ ಸಹಾಯಾರ್ಥ ಆಯೋಜಿಸಲಾದ ಲಕ್ಕಿಡಿಪ್ ಕೂಪನಿನ ಬಿಡುಗಡೆಯನ್ನು ಭಾನುವಾರ ಎಡನೀರು ಶ್ರೀ ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ನಿರ್ವಹಿಸಿದರು. 

                     ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ಗೋವಿಂದ ಭಟ್ ಎದುರ್ತೋಡು, ಕಾರ್ಯದರ್ಶಿ  ವಿನಯ ಪಾಲ್, ಖಜಾಂಜಿ ಗಣೇಶ್, ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಪ್ರೊ.ಎ. ಶ್ರೀನಾಥ್, ವೇಣುಗೋಪಾಲ ಎಡನೀರು, ಪುರುಷೋತ್ತಮ, ದೀಪಕ್, ಸಂತೋಷ್ ನಾಯರ್ ಮುಂತಾದವರು ಉಪಸ್ಥಿತರಿದ್ದರು.

                    ಭಗವದ್ಭಕ್ತರ ಆರ್ಥಿಕ ಸಹಾಯದಿಂದ ಈ ಮೂಲಕ ಶೀಘ್ರದಲ್ಲೇ ಮಂದಿರ ನಿರ್ಮಾಣವಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗಿ ಎಂದು ಶ್ರೀಗಳು ಆಶೀರ್ವಚನ ನೀಡಿ ಹರಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries