ಸಮರಸ ಚಿತ್ರ ಸುದ್ದಿ:ಕಾಸರಗೋಡು: ಆಲ್ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್(ಎಐಐಎಂಎಸ್)ಕಾಸರಗೋಡು ಜಿಲ್ಲೆಯಲ್ಲಿ ಸ್ಥಾಪಿಸುವಂತೆ ಹಲವು ವರ್ಷಗಳಿಂದ ನಡೆದುಬರುತ್ತಿರುವ ಹೋರಾಟದ ಅಂಗವಾಗಿ ಏಮ್ಸ್ ಜನಪರ ಒಕ್ಕೂ ವತಿಯಿಂದ ನ. 17ರಂದು ನಡೆಯಲಿರುವ ಜನಕೀಯ ರ್ಯಾಲಿಯ ಭಿತ್ತಿಪತ್ರದ ಉದ್ಘಾಟನೆಯನ್ನು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಅಧ್ಯಕ್ಷ ಕೆ. ಅಹಮ್ಮದ್ ಶೆರೀಫ್ ಬಿಡುಗಡೆಗೊಳಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಗಣೇಶನ್ ಅರಮಂಗಾನ, ಸುಬೈರ್ ಪಡ್ಪು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.