ಕಾಸರಗೋಡು: ಐಕ್ಯ ಸರ್ಕಾರೇತರ ಸಂಸ್ಥೆ (ರಿ)ಕುಮಟ ಹಾಗೂ ಉತ್ತರ ಕನ್ನಡ ಬ್ಲಡ್ ಬ್ಯಾಂಕ್ ಕುಮಟಾ ಆಶ್ರಯದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ, ಚಿತ್ರನಟ, ನಿರ್ದೇಶಕ ಕಾಸರಗೋಡು ಚಿನ್ನಾ ಅನುವಾದಿಸಿರುವ ಕೃತಿಗಳ ಬಿಡುಗಡೆ ಸಮಾರಂಭ ನ, 13ರಂದು ಸಂಜೆ 5ಕ್ಕೆ ಕುಮಟಾದ ಉತ್ತರ ಕನ್ನಡ ಬ್ಲಡ್ ಬ್ಯಾಂಕ್ ಸಭಾ ಭವನದಲ್ಲಿ ಜರುಗಲಿದೆ.
ಕುಮಟಾ ಶಾಸಕ ದಿನಕರ ಶೆಟ್ಟಿ ಸಮಾರಂಭ ಉದ್ಘಾಟಿಸುವರು. ಕೊಂಕಣಿ ಅಕಾಡಮಿ ಸದಸ್ಯ ಚಿದಾನಂದ ಭಂಡಾರಿ ಅವರು ಅನುವಾದಿತ ಕೃತಿಗಳಾದ ಸೂಣೆ ಅನಿ ಸೂಣೆ ಬಾಲ ಬಗ್ಗೆ ಮಾತನಾಡುವರು. ಉದ್ಯಮಿ, ಕುಮಟಾದ ಕೊಂಕಣಿ ಪರಿಷತ್ ಉಪಾಧ್ಯಕ್ಷ ಮುರಳೀಧರ ಪ್ರಭು ಕೃತಿಗಳ ಅನಾವರಣ ನಡೆಸುವರು. ರಂಗ ಚಿನ್ನಾರಿ ಕಾಸರಗೋಡು ಮತ್ತು ಕಾರವಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಕಾಸರಗೋಡು ಚಿನ್ನಾ ಭಾಷಾಂತರಿತ ರಂಗವಿನ್ಯಾಸದೊಂದಿಗೆ ನಿರ್ದೇಶಿಸಿದ 'ಒಬ್ಬ-ಇನ್ನೊಬ್ಬ'ಕನ್ನಡ ನಾಟಕ ನಾಟಕ ಪ್ರದರ್ಶನಗೊಳ್ಳಲಿದೆ.