ಕೊಲ್ಲಂ: ವಿವಾಹ ಮಂಟಪದಲ್ಲಿ ಜಗಳ ನಡೆದು ಕೊನೆಗೆ ಯುವತಿ ಕಟ್ಟಿದ ತಾಳಿಯನ್ನು ವಾಪಸ್ ನೀಡಿದ ಘಟನೆ ನಡೆದಿದೆ. ಶುಕ್ರವಾರ ಕೊಲ್ಲಂ ಕಡಕ್ಕಲ್ ನಲ್ಲಿ ಇಂತಹ ನಾಟಕೀಯ ದೃಶ್ಯವೊಂದು ನಡೆದಿದೆ. ವಿವಾಹ ಮಂಟಪದಲ್ಲಿ ಕೈದೀಪ ಹಚ್ಚುವ ವಿಚಾರದಲ್ಲಿ ಉಂಟಾದ ವಿವಾದದಿಂದ ಘಟನೆ ನಡೆದಿದೆ. ತಾಳಿ ಬಿಚ್ಚಿದ ಯುವತಿಯನ್ನು ಅದೇ ಸ್ಥಳದಲ್ಲಿ ಸಂಬಂಧಿಕ ಯುವಕನೊಂದಿಗೆ ವಿವಾಹ ಮಾಡಿಸಿದರೆಂದು ಹೇಳಲಾಗಿದೆ.
ಕೊಲ್ಲಂನ ಅಲ್ಟಾರಾಮಸ್ ನ ಯುವತಿ ಮತ್ತು ಕಿಳಿಮಾನೂರಿನ ಯುವಕನ ನಡುವಿನ ವಿವಾಹ ನಾಟಕೀಯವಾಗಿ ಕೊನೆಗೊಂಡಿತು. ಸಭಾಂಗಣದಲ್ಲಿ ಕೈದೀಪ ಆರತಿ ಮಾಡಬಾರದು ಮತ್ತು ಪಾದರಕ್ಷೆಯನ್ನು ತೆಗೆಯುವಂತಿಲ್ಲ ಎಂದು ವರ ಒತ್ತಾಯಿಸಿದ. ಇದರೊಂದಿಗೆ ಮದುವೆ ಸಮಾರಂಭವು ಬುಗಿಲೆದ್ದಿತು. ಬಳಿಕ ಮಂಟಪದ ಹೊರಗೆ ವಿವಾಹ ನಡೆಯಿತು.
ಆದರೆ ವಾಪಸ್ಸು ಬರುವಾಗ ಅದೇ ವಿಚಾರವಾಗಿ ವರನು ಹುಡುಗಿಯ ಮನೆಯವರೊಂದಿಗೆ ಜಗಳ ಮಾಡಿಕೊಂಡ. ಎರಡು ಕುಟುಂಬಗಳ ನಡುವಿನ ಜಗಳವೇ ಇದಕ್ಕೆ ಕಾರಣವಾಗಿದ್ದು, ಯುವತಿ ಕರಿಮಣಿ ಬಿಚ್ಚಿ ವಾಪಸ್ ನೀಡಿದ್ದಾಳೆ.
ವÀರದಿಗಳ ಪ್ರಕಾರ, ಮಹಿಳೆ ತನ್ನ ಸಂಬಂಧಿಕರ ಸೂಚನೆಯ ಮೇರೆಗೆ ತಾಳಿಯನ್ನು ಬಿಚ್ಚಿಕೊಟ್ಟಳು. ಘಟನೆ ಕುರಿತು ಮದುಮಗಳ ಮನೆಯವರು ಪೋಲೀಸರಿಗೆ ದೂರು ಕೂಡ ನೀಡಿದ್ದಾರೆ. ನಾಟಕೀಯ ಘಟನೆಗಳ ನಂತರ, ಅದೇ ಸ್ಥಳದಲ್ಲಿ ಸಂಬಂಧಿಕರಾದ ಇನ್ನೊಬ್ಬ ಯುವಕ ಹುಡುಗಿಯನ್ನು ವಿವಾಹವಾದ.