ಆಲಪ್ಪುಳ: ವಿಧಾನಸಭೆ ಚುನಾವಣೆಯಿಂದ ತೊಡಗಿ ಸ್ಥಳೀಯಾಡಳಿತ ಚುನಾವಣೆಯ ವರೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ತನ್ನ್ನೂ ಸೇರಿಸಿ ಎಲ್ಲಾ ಮುಖಂಡರಿಗೂ ನ್ಯಾಯದೊರಕಿಸಲಾಗಲಿಲ್ಲ ಎಂದು ಕಾಂಗ್ರೆಸ್ಸ್ ನೇತಾರ ರಮೇಶ್ ಚೆನ್ನಿತ್ತಲ ಹೇಳಿರುವರು. ಐ ಎನ್ ಟಿ ಯು ಸಿ ಆಲಪ್ಪುಳ ಜಿಲ್ಲಾ ಮಹಾಸಭೆಯಲ್ಲಿ ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ಮಾತನಾಡುತ್ತಿದ್ದರು.
ಸಭೆಯಲ್ಲಿ ಚೆನ್ನಿತ್ತಲ ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದರು. ಹುರಿಹಗ್ಗ, ಗೋಡಂಬಿ ಮತ್ತು ಕೃಷಿ ವಲಯಗಳು ರಾಜ್ಯದಲ್ಲಿ ಸ್ಮಶಾನಕ್ಕೆ ಸಮನಾಗಿ ಮಾಡಲಾಗಿದೆ. ಕೊರೊನಾ ಯುಗದಲ್ಲಿ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವಾಗಲು ಪಿಣರಾಯಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಕೆಎಸ್‍ಆರ್‍ಟಿಸಿ ನೌಕರರಿಗೆ ವೇತನ ಮತ್ತು ಪಿಂಚಣಿ ನೀಡಲು ಸಾಧ್ಯವಾಗದ ರಾಜ್ಯ ಸರ್ಕಾರ ಕಾರ್ಮಿಕ ವಿರೋಧಿ ಸರ್ಕಾರವಾಗಿದೆ ಎಂದು ಆರೋಪಿಸಿದರು.