ಕಣ್ಣೂರು; ಕಳ್ಳರು ಕದ್ದ ವಸ್ತುಗಳನ್ನು ಸ್ವ ಇಚ್ಚೆಯಿಂದ ಹಿಂದಿರುಗಿಸಿದ ಅಪೂರ್ವ ಘಟನೆ ನಡೆದಿದೆ. ಕದ್ದ ಹಣ ಹಾಗೂ ಚಿನ್ನವನ್ನು ಪರಿಯಾರಂ ಪಂಚಾಯತಿ ಎರಡನೇ ವಾರ್ಡ್ ಸದಸ್ಯ ಮೊಹಮ್ಮದ್ ಅಶ್ರಫ್ ಅವರ ಮನೆ ಮುಂದೆ ಬಿಟ್ಟು ಹೋಗಿದ್ದಾರೆ. ಜೊತೆಗೊಂದು ಕ್ಷಮಾಪಣೆ ಪತ್ರವೂ ಇತ್ತು. ಕಳ್ಳತನಗೈದ ವಸ್ತುಗಳ ಮಾಲೀಕರ ವಿಳಾಸವನ್ನೂ ಕಾಗದದಲ್ಲಿ ಬರೆದು ವಸ್ತುಗಳನ್ನು ಮಾಲೀಕರಿಗೆ ಹಿಂತಿರುಗಿಸಬೇಕೆಂದು ಒತ್ತಾಯಿಸಿರುವರು.
ಈ ಪ್ರದೇಶದಲ್ಲಿ ಕಳ್ಳತನ ಮಾಡಿದ ಏಳು ಮಂದಿ ಕಳ್ಳರು ಕದ್ದ ಹಣ ಹಾಗೂ ಚಿನ್ನಾಭರಣವನ್ನು ಮನೆಯ ವರಾಂಡದಲ್ಲಿ ಬಿಟ್ಟು ಹೋಗಿದ್ದಾರೆ. ಕೊರೋನಾ ಅವಧಿಯಲ್ಲಿ ನಾವು ಸಾಕಷ್ಟು ಕಷ್ಟ ನಷ್ಟಗಳನ್ನು ಎದುರಿಸಿದ್ದೇನೆ ಮತ್ತು ಅದಕ್ಕಾಗಿಯೇ ಕಳ್ಳತನ ಮಾಡಬೇಕಾಯಿತು ಎಂದು ತಿಳಿಸುವ ಪತ್ರವು ಅದರೊಂದಿಗೆ ಇತ್ತು.
ಕವರ್ ನಲ್ಲಿ 1,91,500 ರೂ., 37.500 ಗ್ರಾಂ ಚಿನ್ನಾಭರಣ ಹಾಗೂ 630 ಮಿಲಿಗ್ರಾಂ ಚಿನ್ನದ ಆಭರಣಗಳಿದ್ದು, ಕವರ್ ಗಳನ್ನು ಮೊದಲು ನೋಡಿದ್ದು ಅಶ್ರಫ್ ಅವರ ಸಹೋದರಿ. ಸಹೋದರಿ ಅಶ್ರಫ್‍ಗೆ ವಿಷಯ ತಿಳಿಸಿದ್ದಾರೆ. ಕವರ್‍ಗಳನ್ನು ಅಶ್ರಫ್ ಪರಿಯಾರಂ ಠಾಣೆಗೆ ತಲುಪಿಸಿರುವರು.
ನಮ್ಮನ್ನು ಹುಡುಕಬೇಡಿ ಎಂದೂ ಪತ್ರದಲ್ಲಿ ಹೇಳಲಾಗಿದೆ. ಪತ್ರವು ಪ್ರತಿಯೊಬ್ಬ ವ್ಯಕ್ತಿಗೆ ಮರುಪಾವತಿಸಬೇಕಾದ ನಿಖರವಾದ ಹಣವನ್ನು ಒಳಗೊಂಡಿದೆ. ಪರಿಯಾರಂ ಪೋಲೀಸರು ಚಿನ್ನ ಮತ್ತು ನಗದನ್ನು ವಶಕ್ಕೆ ಪಡೆದು ಆರೋಪಿಗಳಿಗಾಗಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.