ಕಾಸರಗೋಡು: ಅಡಕೆ ಕೃಷಿಕ ಸಮುದಾಯದ ಸಮಸ್ಯೆ ಪರಿಹರಿಸಲು ಮಂಗಳೂನ ಕ್ಯಾಂಪೆÇ್ಕ ಸಂಸ್ಥೆ ದೋಟಿಯಮೂಲಕ ಅಡಕೆ ಕೊಯ್ಲು ತರಬೇತಿ ನೀಡಲುನಿರ್ಧರಿಸಿದೆ.ವಿಟ್ಲದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಡಿಪಿಸಿಆರ್‍ಐ) ಮತ್ತು ಅಡಕೆ ಪತ್ರಿಕೆ ಸಹಭಾಗಿತ್ವದಲ್ಲಿ ಜನವರಿ ತಿಂಗಳ 10ರಿಂದ12 ರ ವರೆಗೆ ಮೂರು ದಿನ ವಿಟ್ಲ ಸಿಪಿಸಿಆರ್‍ಐಯಲ್ಲಿ ನಡೆಯಲಿದೆ.
ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 18ರಿಂದ 35 ವರ್ಷದ ಒಳಗಿನ ಯುವಕರು ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಫಾರಂಗಳನ್ನು ಆಯಾ ಕ್ಯಾಂಪೆÇ್ಕೀ ಶಾಖೆಗಳಿಂದ ಪಡೆಯಬಹುದು. ಅರ್ಜಿಯ ಜೊತೆಗೆ ಇತ್ತೀಚೆಗಿನ ಎರಡು ಭಾವಚಿತ್ರ, ಆಧಾರ್ ಮತ್ತು ಪಾನ್ ಕಾರ್ಡಿನ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಬೇಕು. ಭರ್ತಿಗೊಳಿಸಿದ ಅರ್ಜಿ ಫಾರ್ಮನ್ನು ಕ್ಯಾಂಪೆÇ್ಕೀದ ಯಾವುದೇ ಶಾಖೆಯಲ್ಲಿ ಸಲ್ಲಿಸಬಹುದು. ಅನುಭವಿ ತರಬೇತುದಾರರು ಫೈಬರ್ ಕಾರ್ಬನ್ ದೋಟಿ ಬಳಸಿ ಅಡಿಕೆ ಕೊಯ್ಲು ಮತ್ತು ಸಿಂಪಡಣೆ ಮಾಡಲು ತರಬೇತಿ ನೀಡಲಿದ್ದಾರೆ. ತರಬೇತಿಯಲ್ಲಿ ಒಟ್ಟು 20 ಮಂದಿಗೆ ಮಾತ್ರ ಅವಕಾಶ ಇರುತ್ತದೆ. ಶಿಬಿರದ ಅವಧಿಯಲ್ಲಿ ಈ ಅಭ್ಯರ್ಥಿಗಳಿಗೆ ಶಿಬಿರ ಕೇಂದ್ರ ವಾಸ್ತವ್ಯ ಕಡ್ಡಾಯ. ಉಚಿತ ವಾಸ್ತವ್ಯ ಮತ್ತು ಆಹಾರದ ಏರ್ಪಾಡು ಇದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 20 ಆಗಿದೆ. ಮೂರು ವರ್ಷ ಹಿಂದೆ ಕ್ಯಾಂಪೆÇ್ಕೀ ಅಡಕೆ ಮರ ಏರಿ ಕೊಯ್ಲು - ಸಿಂಪಡಣೆ ಮಾಡಲು ಎರಡು ತರಬೇತಿ ಶಿಬಿರ ನಡೆಸಿತ್ತು.
ತರಬೇತಿಯ ಬಗ್ಗೆ ಹೆಚ್ಚಿನ ವಿವರಗಳಿಗೆ ಶಂ. ನಾ. ಖಂಡಿಗೆ ( ಶಿಬಿರಾಧಿಕಾರಿ) : 99464 06321, ಈಶ್ವರ ನಾಯ್ಕ : 94493 32906 ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.