ಕಣ್ಣೂರು: ಜೇಬಿನಲ್ಲಿದ್ದ ಮೊಬೈಲ್ ಸ್ಫೋಟಗೊಂಡು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಗಾಯಗೊಂಡ ಘಟನೆ ನಡೆದಿದೆ. ಪರಿಯಾರಂ ಸರ್ಕಾರಿ ವ್ಯೆದ್ಯಕಿಯ ಕಾಲೇಜಿನ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ವಡಕರದ ರೋಶಿ (21) ಗಾಯಗೊಂಡಿದ್ದು, ಅವರನ್ನು ತಳಿಪರಂಬ ಲೂರ್ಡ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ರಾತ್ರಿ ಪರಿಯಾರ್‌ಗೆ ಹೋಗುತ್ತಿದ್ದಾಗ ಬಸ್ ಹಾನಿಗೊಂಡು ದಾರಿ ಮಧ್ಯೆ ನಿಂತಿತ್ತು. ಅಷ್ಟರಲ್ಲಿ ರೋಷಿಯ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟಗೊಂಡಿದೆ.