ಕಾಸರಗೋಡು: ಸೀನಿಯರ್ ಜರ್ನಲಿಸ್ಟ್ ಯೂನಿಯನ್ ಕಾಸರಗೋಡು ಜಿಲ್ಲಾ ಸಮಿತಿ ಸಮ್ಮೇಳನ ಕಾಸರಗೋಡು ವಿದ್ಯಾನಗರದಲ್ಲಿ ಜರುಗಿತು. ಹಿರಿಯ ಪತ್ರಕರ್ತ ಸುಬ್ಬಣ್ಣ ಶೆಟ್ಟಿ ಕೆ. ಅಧ್ಯಕ್ಷತೆ ವಹಿಸಿದ್ದರು.
ಅರ್ಹರಾದ ಎಲ್ಲ ಪತ್ರಕರ್ತರಿಗೂ ಪಿಂಚಣಿ ವ್ಯವಸ್ಥೆ ಏರ್ಪಡಿಸಬೇಕು. ಪತ್ರಿಕಾ ಚಟುವಟಿಕೆಗಳನ್ನು ಮಾತ್ರ ಉದ್ಯೋಗವಾಗಿ ನೆಚ್ಚಿಕೊಂಡಿರುವ ಹಲವುಮಂದಿ ಹಿರಿಯ ಪತ್ರಕರ್ತರನ್ನು ಈ ಯೋಜನೆಗೆ ಒಳಪಡಿಸದಿರುವುದರಿಂದ ಅವರ ಭಾವಿ ಜೀವನ ಸಂಕಷ್ಟದತ್ತ ಸಾಗಿರುವುದಾಗಿ ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮಲಾರ್ ಜಯರಾಮ ರೈ ರಕ್ಷಾಧಿಕಾರಿ, ಕೆ. ಸುಬ್ಬಣ್ಣ ಶೆಟ್ಟಿ ಅಧ್ಯಕ್ಷ, ಮಾನ್ಯುವೆಲ್ ಕುರಿಚ್ಚಿತ್ತಾನಂ ಉಪಾಧ್ಯಕ್ಷ, ಎಸ್. ಸುರೇಂದ್ರನ್ ಕಾರ್ಯದರ್ಶಿ, ದೇವದಾಸ್ ಪಾರೆಕಟ್ಟ ಜತೆ ಕಾರ್ಯದರ್ಶಿ ಹಾಗೂ ಬಿ.ಶ್ರೀಧರ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.