ಕಾಸರಗೋಡು: ಕಾಸರಗೋಡು ಜಿಲ್ಲೆಯ ಶುಚೀಕರಣ ಸಿಬ್ಬಂದಿಯೊಂದಿಗೆ ನ್ಯಾಷನಲ್ ಕಮೀಷನ್ ಫಾರ್ ಸಫಾಯಿ ಕರ್ಮಚಾರೀಸ್ ಸದಸ್ಯರಾಗಿರುವ ಕೇಂದ್ರ ಸರಕಾರದ ಸ್ಟಾಟಸ್ ಕಾರ್ಯದರ್ಶಿ ಡಾ.ಪಿ.ಪಿ.ವಾವ ಸಂವಾದ ನಡೆಸಿದರು.
ಕೇರಳ ರಾಜ್ಯ ಸಂದರ್ಶನದ ಅಂಗವಾಗಿ ಕಾಸರಗೋಡು ಜಿಲ್ಲೆಗೆ ಭೇಟಿ ನೀಡಿದ ಅವರು ಜಿಲ್ಲಾಧಿಕಾರಿ ಕಚೇಋಇಯ ಕಿರು ಸಭಾಂಗಣದಲ್ಲಿ ಶುಚೀಕರಣ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ವಿವಿಧ ಇಲಾಕೆಗಳ ಮುಖ್ಯಸ್ಥರು, ನಗರಸಭೆ ಕಾರ್ಯದರ್ಶಿಗಳು, ನಗರಸಭೆಗಳ ಶುಚೀಕರಣ ಸಿಬ್ಬಂದಿ, ಸಫಾಯಿ ಕರ್ಮಚಾರೀಸ್ ಪ್ರತಿನಿಧಿಗಳು, ಆರೋಗ್ಯ ವಿಭಾಗ ಸಿಬ್ಬಂದಿ ಮೊದಲಾದವರೊಂದಿಗೆ ಅವರು ಮಾತುಕತೆ ನಡೆಸಿದರು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್, ರಾಜ್ಯ ಸಂಚಾಲಕ ನ್ಯಾಯವಾದಿ ಗೋಪಿ ಕೊಚ್ಚುರಾನ್. ಶುಚಿತ್ವ ಮಿಷನ್ ಜಿಲ್ಲಾ ಸಂಚಾಲಕಿ ಲಕ್ಷ್ಮಿ ಎ., ಸಹಾಯಕ ಸಂಚಾಲಕ ಕೆ.ವಿ.ಪ್ರೇಮರಾಜನ್ ಮೊದಲಾದವರು ಉಪಸ್ಥಿತರಿದ್ದರು.
ನಂತರ ಅಮೈ ಕಾಲನಿಗೆ ಭೇಟಿ ನೀಡಿದ ಅವರು ಶುಚೀಕರಣ ಸಿಬ್ಬಂದಿಯ ಕುಟುಂಬಗಳ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಇಲ್ಲಿ ತಲೆದೋರಿರುವ ಜಾಗ ಸಂಬಂದ ಸಮಸ್ಯೆಗಳನ್ನು ಪರಿಹರಿಸಲು ಅವರು ಜಿಲ್ಲಾಧಿಕಾರಿಗೆ ಆದೇಶ ನೀಡಿದರು.