HEALTH TIPS

ಓಮೈಕ್ರಾನ್‌ ವಿರುದ್ಧ ಭಾರತೀಯರಿಗಿದೆ ರಕ್ಷಣೆ: ವೈರಾಣು ತಜ್ಞರ ವಿವರಣೆ

               ನವದೆಹಲಿ: 'ಬಹು ದೊಡ್ಡ ಸಂಖ್ಯೆಯ ಭಾರತೀಯರು ಓಮೈಕ್ರಾನ್ ಅಥವಾ ಕೋವಿಡ್‌ನ ಯಾವುದೇ ರೂಪಾಂತರದಿಂದ ಬಾಧೆಗೆ ಒಳಗಾಗುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ,' ಎಂದು ಖ್ಯಾತ ವೈರಾಣು ತಜ್ಞ ಡಾ ಶಾಹಿದ್ ಜಮೀಲ್ ಅಭಿಪ್ರಾಯಪಟ್ಟಿದ್ದಾರೆ.


            ಜಮೀಲ್ ಅವರು ಭಾರತೀಯ 'ಸಾರ್ಸ್‌ ಕೋವ್‌-2 ಜೀನೋಮಿಕ್ಸ್ ಕನ್ಸೋರ್ಟಿಯಾ(ಐಎನ್‌ಎಸ್‌ಎಸಿಒಜಿ)ದ' ಸಲಹಾ ಗುಂಪಿನ ಮಾಜಿ ಮುಖ್ಯಸ್ಥರು.

'ಜನರು ಜಾಗರೂಕರಾಗಿರಬೇಕು ಮತ್ತು ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು,' ಎಂದು ಅವರು   ಇದೇ ವೇಳೆ ಎಚ್ಚರಿಸಿದ್ದಾರೆ.

               'ನಾವು ಜಾಗರೂಕರಾಗಿರಬೇಕೇ ಹೊರತು ಭಯಪಡುವ ಅಗತ್ಯವಿಲ್ಲ. ಡೆಲ್ಟಾ ರೂಪಾಂತರದ ಕಾರಣದಿಂದಾಗಿ ಭಾರತದಲ್ಲಿ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಹಾನಿಯುಂಟು ಮಾಡಿತು. ನಾವು ಊಹಿಸಿದ್ದಕ್ಕಿಂತ ಹೆಚ್ಚು ಜನರಿಗೆ ಸೋಂಕು ತಗುಲಿತು. ಇದು ನಾಲ್ಕನೇ ರಾಷ್ಟ್ರೀಯ ಸೆರೋ-ಸರ್ವೆಯಲ್ಲಿ ಪ್ರತಿಬಿಂಬಿತವಾಗಿದೆ. ಈಗ ಶೇ 67 ರಷ್ಟು ಭಾರತೀಯರಲ್ಲಿ ಕೋವಿಡ್‌ ಪ್ರತಿಕಾಯಗಳಿರುವುದು ಗೊತ್ತಾಗಿದೆ,' ಎಂದು ಅವರು ಹೇಳಿದ್ದಾರೆ.

             'ದೆಹಲಿಯಲ್ಲಿ ಶೇ 97ರಷ್ಟು ಮಂದಿಯಲ್ಲಿ ಪ್ರತಿಕಾಯಗಳಿವೆ. ಮುಂಬೈನ ಶೇ 85-90 ಜನರಲ್ಲಿ ಪ್ರತಿಕಾಯ ಇದೆ. ಇದರರ್ಥ ಹೆಚ್ಚಿನ ಭಾರತೀಯರು ಓಮೈಕ್ರಾನ್ ಅಥವಾ ಇತರ ಯಾವುದೇ ರೂಪಾಂತರದಿಂದ ಉಂಟಾಗುವ ತೀವ್ರವಾದ ಕಾಯಿಲೆ ವಿರುದ್ಧ ರಕ್ಷಣಾ ವ್ಯವಸ್ಥೆ ಹೊಂದಿದ್ದಾರೆ' ಎಂದು ಜಮೀಲ್ ಹೇಳಿದರು. .

            ಹೆಚ್ಚಿನ ಪ್ರಮಾಣದ ಸ್ಪೈಕ್ ರೂಪಾಂತರಗಳನ್ನು ಹೊಂದಿರುವ ಕೊರೊನಾ ವೈರಸ್‌ನ ರೂಪಾಂತರಿ ತಳಿಯು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದೆ. ನವೆಂಬರ್ 26 ರಂದು ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಕಳವಳಕಾರಿ ಏಂದು ಹೇಳಿದೆ.

            ಹೊಸ ರೂಪಾಂತರದ ವಿರುದ್ಧ ಲಸಿಕೆಗಳ ಪ್ರಭಾವದ ಕುರಿತು ಮಾತನಾಡಿರುವ ಜಮೀಲ್, 'ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ರೂಪಾಂತರಿ ವೈರಸ್‌ ವಿರುದ್ಧ ಲಸಿಕೆ ಪ್ರಭಾವವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಆದರೆ, ಲಸಿಕೆಗಳು ನಿಷ್ಪ್ರಯೋಜಕವಾಗುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries