ಪೆರ್ಲ: ಕರ್ನಾಟಕದಲ್ಲಿ ಎಂಎಲ್ಸಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪುತ್ತೂರು ಉಪವಿಭಾಗ ಅಬಕಾರಿದಳ ಉಪ ಅಧೀೀಕ್ಷಕ ಶಿವಪ್ರಸಾದ್ ಮತ್ತು ಕಾಸರಗೋಡು ಅಬಕಾರಿದಳ ಸರ್ಕಲ್ ಇನ್ಸ್ಪೆಕ್ಟರ್ ಟೋನಿ ಎಸ್ ಐಸಾಕ್ ನೇತೃತ್ವದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯ ಅಬಕಾರಿ ಇಲಾಖೆ ಸಿಬ್ಬಂದಿಗಳು ಶುಕ್ರವಾರ ಸಂಜೆ ಉಭಯ ರಾಜ್ಯ ಗಡಿ ಸ್ವರ್ಗದಲ್ಲಿ ಜಂಟಿ ತಪಾಸಣೆ ನಡೆಸಿದರು.
ಸ್ವರ್ಗದಲ್ಲಿ ಉಭಯ ರಾಜ್ಯ ಗಡಿ ದಾಟಿ ಬರುವ ವಾಹನಗಳ ತಪಾಸಣೆ ನಡೆಸಲಾಗಿದ್ದು ಇದೊಂದು ಮಾಮೂಲಿ ತಪಾಸಣೆ ಹಾಗೂ ಜಂಟಿ ತಪಾಸಣೆ ಮುಂದುವರಿಯಲಿದೆ ಎಂದು ಪುತ್ತೂರು ಉಪವಿಭಾಗ ಅಬಕಾರಿದಳ ಉಪ ಅಧೀೀಕ್ಷಕ ಶಿವಪ್ರಸಾದ್ ತಿಳಿಸಿದ್ದಾರೆ.