ಕಾಸರಗೋಡು: ಹಸಿರು ಕೇರಳ ಮಿಷನ್ ನೇತೃತ್ವದಲ್ಲಿ ಕಾಸರಗೊಡು ಜಿಲ್ಲೆಯಲ್ಲಿ ಜಾರಿಗೊಳ್ಳುತ್ತಿರುವ ಪೆನ್ ಫ್ರೆಂಡ್ ಯೋಜನೆಗೆ ತೆಕ್ಕಿಲ್ ಪರಂಬ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಲನೆ ನೀಡಲಾಯಿತು.
ಬಳಕೆಗೆ ಬಾರದ ಪೆನ್ ಗಳನ್ನು ಸಂಗ್ರಹಿಸಿ ಪುನರ್ ನಿರ್ಮಾಣಕ್ಕೆ ನಿಡುವುದು, ವಿದ್ಯಾರ್ಥಿಗಳಲ್ಲಿ ತ್ಯಾಜ್ಯ ನಿವಾರಣೆ ಕುರಿತಾದ ಜಾಗೃತಿ ಮೂಡಿಸುವುದು, ಏಕಬಾರಿಗೆ ಬಳಸುವ ಪೆನ್ ಗಳ ಬಳಕೆ ಕಡಿಮೆಗೊಳಿಸುವುದು ಇತ್ಯಾದಿ ಉದ್ದೇಶಗಳೊಂದಿಗೆ ಪೆನ್ ಫ್ರೆಂಡ್ ಯೋಜನೆ ಜಾರಿಗೊಳ್ಳುತ್ತಿದೆ.
ಹಸಿರು ಕೇರಳ ಯೋಜನೆ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಉದ್ಘಾಟಿಸಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಎಂ.ರಾಘವನ್ ವಲಿಯವೀಟ್ಟಿಲ್ ಅಧ್ಯಕ್ಷತೆ ವಹಿಸಿದ್ದರು. ಸಿ.ಹರಿದಾಸ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಪಿ.ಸಿ.ನಜೀರ್ ಮೊದಲಾದವರು ಉಪಸ್ಥಿತರಿದ್ದರು.