ಕಾಸರಗೋಡು: ಕಾರಡ್ಕ ಬ್ಲಾಕ್ ಪಂಚಾಯತ್ ನ ಡಯಾಲಿಸಿಸ್ ಯೋಜನೆಯ ಲಾಂಛನ ಬಿಡುಗಡೆ ಕಾಸರಗೋಡು ಪ್ರೆಸ್ ಕ್ಲಬ್ ನಲ್ಲಿ ನಿನ್ನೆ ಜರುಗಿತು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನ್ ಎಂ. ಅವರು ಪ್ರೆಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಹಾಶಿಂ ಅವರಿಗೆ ಹಸ್ತಾಂತರಿಸಿ ಲಾಂಛನ ಬಿಡುಗಡೆಗೊಳಿಸಿದರು. ಕಾರಡ್ಕ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯೂ, ಉಪಾಧ್ಯಕ್ಷೆ ಕೆ.ರಮಣಿ, ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಬಿ.ಕೆ.ನಾರಾಯಣನ್, ಪಿ.ಸವಿತಾ, ಸದಸ್ಯ ಕೆ.ಕುಂಞಂಬು ನಂಬ್ಯಾರ್ , ವೈದ್ಯಾಧಿಕಾರಿ ಡಾ.ಎಸ್.ಲೇಖಾ, ಎಚ್.ಎಂ.ಸಿ. ಪ್ರತಿನಿಧಿ ಕೆ.ಬಿ.ಮುಹಮ್ಮದ್ ಕುಂuಟಿಜeಜಿiಟಿeಜ, ಅಶೋಕ್ ಕುಮಾರ್ ಕೋಡೋಂ ಉಪಸ್ಥಿತರಿದ್ದರು.