ಮಂಜೇಶ್ವರ: ಶತಮಾನದ ಮಹಿಳೆ, ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಧೀರೋದಾತ್ತ ಬದುಕು ಮತ್ತು ಆಡಳಿತದ ಪ್ರತಿಫಲವನ್ನು ದೇಶದ ಸಕಲ ಜನತೆಯೂ ಅನುಭವಿಸಿದ್ದಾರೆ. ಬಡವರ ಪಾಲಿಗೆ ಮುಚ್ಚಿದ್ದ ಬ್ಯಾಂಕ್ ಗಳನ್ನು ರಾಷ್ಟ್ರೀಕರಣದ ಮೂಲಕ ಬಡವರಿಗೆ ತೆರೆದು ಕೊಟ್ಟ ಇಂದಿರಾಜಿಯವರು ರಾಜಧನ ರದ್ದತಿ, ಕ್ರಾಂತಿಕಾರಿ ಭೂಮಸೂದೆ,ಬಾಂಗ್ಲಾ ವಿಮೋಚನೆ,ಇಪ್ಪತ್ತಂಶಗಳ ಬಡತನ ಲಘೂಕರಣ ಯೋಜನೆಗಳು, ಸಾಮಾಜಿಕ ಸುರಕ್ಷಾ ಪಿಂಚಣಿಗಳು ಹಾಗೂ ಹಲವಾರು ಜನಪ್ರಿಯ ಯೋಜನೆಗಳ ಮುಖಾಂತರ ದೇಶವನ್ನು ಜಗತ್ತಿನ ಇತರ ರಾಷ್ಟ್ರಗಳ ಮುಂದೆ ಸ್ವಾವಲಂಬಿ,
ಸ್ವಾಭಿಮಾನಿ ರಾಷ್ಟ್ರವನ್ನಾಗಿ ರೂಪಿಸಿದ್ದರು. ಭಾರತವನ್ನು ಜಗತ್ತಿನ ಸೂಪರ್ ಪವರ್ ದೇಶಗಳ ಸಾಲಿಗೆ ಸೇರಿಸಿದ ಇಂದಿರಾಜಿಯವರು ಭಾರತೀಯರಿಗೆಲ್ಲರಿಗೂ ಅಕ್ಷರಶಃ ಪ್ರಾತಃಸ್ಮರಣೀಯರಾಗಿದ್ದಾರೆ ಎಂದು ಕೇರಳ ಪ್ರದೇಶ್ ಕಾಂಗ್ರೆಸ್ಸ್ ಸಮಿತಿ(ಕೆಪಿಸಿಸಿ)ಕಾರ್ಯದರ್ಶಿ ನ್ಯಾಯವಾದಿ ಬಿ.ಸುಬ್ಬಯ್ಯ ರೈ ಹೇಳಿದರು.
ದೇಶದ ಏಕತೆಗಾಗಿ ಪ್ರಾಣತ್ಯಾಗ ಮಾಡಿದ ಇಂದಿರಾಜಿಯವರ ಪುಣ್ಯತಿಥಿಯ ದಿನದಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾದ ಇಂದಿರಾಗಾಂಧಿ ಸ್ಮೃತಿ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವಹಿಸಿದ್ದರು.ಹೊಸಂಗಡಿಯಿಂದ ಉಪ್ಪಳದವರೆಗೆ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು. ನೇತಾರರಾದ ಉಮ್ಮರ್ ಬೊರ್ಕಳ, ಪಿ ಸೋಮಪ್ಪ, ಜಿಲ್ಲಾಪಂಚಾಯತ್ ಸದಸ್ಯೆ ಕಮಲಾಕ್ಷಿ, ಹರ್ಷಾದ್ ವರ್ಕಾಡಿ, ಪಿ ಎ ಕಾದರ್ ಹಾಜಿ, ಉಮ್ಮರ್ ಶಾಫಿ, ವಸಂತ್ ರಾಜ್ ಶೆಟ್ಟಿ, ಸಂಕಬೈಲ್ ಸತೀಶ್ ಅಡಪ್ಪ, ಟಿ ಪ್ರಭಾಕರ್ ನಾಯ್ಕ್, ಬಾಬು ಬಂದ್ಯೋಡ್, ಬರ್ನಾಡ್ ಡಿ ಅಲ್ಮೇಡ, ಖಲೀಲ್ ಬಜಾಲ್, ನಾಗೇಶ್ ಮಂಜೇಶ್ವರ, ಜಗದೀಶ್ ಮೂಡಂಬೈಲು, ಆರಿಫ್ ಮಚ್ಚಂಪಾಡಿ, ಮಮತಾ ದಿವಾಕರ್, ಸೀತಾ ಡಿ, ಶಾಂತಾ ಅರ್ ನಾಯ್ಕ್, ಫ್ರಾನ್ಸಿಸ್ ಡಿ ಸೋಜಾ, ಮೊಹಮ್ಮದ್ ಬೆಜ್ಜ, ಚಂದ್ರ ಶೇಖರ್ ಶೆಟ್ಟಿ ಬೆಜ್ಜ, ಸದಾಶಿವ ಕೆ, ಹಮೀದ್ ಕಣಿಯೂರ್, ಕಾದರ್ ಸಿ ಎಮ್ ನಗರ್, ಕೃಷ್ಣನ್ ಅಡ್ಕತೊಟ್ಟಿ, ಮೊಹಮ್ಮದ್ ಮಜಾಲ್, ಇಬ್ರಾಹಿಂ ಕುಂತೂರ್, ಓಂ ಕೃಷ್ಣ, ಗುರುವಪ್ಪ ಮಂಜೇಶ್ವರ, ಯಾಕೂಬ್ ಕೋಡಿ, ಮಾಲಿಂಗ, ಝಕರಿಯ ಶಾಲಿಮಾರ್, ಮೂಸ ಧರ್ಮನಗರ, ಆಸೀಸ್ ಕಲ್ಲೂರು, ನವೀನ್ ರೈ ಉಪ್ಪಳ, ಯೋಗೀಶ್ ಉದ್ಯಾವರ, ಪ್ರದೀಪ್ ಶೆಟ್ಟಿ ಮುಂತಾದವರು ಜಾಥಾದಲ್ಲಿ ಬಾಗವಹಿಸಿದರು.
ಉಪ್ಪಳದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ದಿವಾಕರ್ ಎಸ್.ಜೆ ಸ್ವಾಗತಿಸಿ, ಮುಹಮ್ಮದ್ ಸೀಗಂಡಡಿ ವಂದಿಸಿದರು.