ವಯನಾಡು: ಆನ್‌ಲೈನ್‌ನಲ್ಲಿ ಆರ್ಡರ್ ಮಾಡೋದು ಒಂದು, ಬರೋದು ಇನ್ನೊಂದು ಎಂಬ ವಿಷಯ ಹೊಸತೇನಲ್ಲ. ಆದರೆ ಇಲ್ಲೊಂದು ವಿಚಿತ್ರ ಕೇಸ್‌ನಲ್ಲಿ ಪಾಸ್‌ಪೋರ್ಡ್ ಕವರ್ ಆರ್ಡರ್ ಮಾಡಿದ್ರೆ, ಒರಿಜಿನಲ್ ಪಾಸ್‌ಪೋರ್ಟೇ ಬಂದಿರುವ ಘಟನೆ ನಡೆದಿದೆ.
ಅದೂ ಯಾರದ್ದೋ ಬೇರೆಯವರ ಪಾಸ್‌ಪೋರ್ಟ್!
ಇಂಥದ್ದೊದು ಘಟನೆ ನಡೆದಿರುವುದು ಕೇರಳದ ವಯನಾಡಿನ ಕಣಿಯಂಬೆಟ್ಟ ಎಂಬಲ್ಲಿ. ಮಿಥುನ್ ಎಂಬುವವರು ಕಳೆದ ಅಕ್ಟೋಬರ್ 30ರಂದು ಆನ್‌ಲೈನ್‌ನಲ್ಲಿ ತಮ್ಮ ಪಾಸ್‌ಪೋರ್ಟ್‌ಗೆ ಸೂಟ್ ಆಗುವ ಕವರ್ ಆರ್ಡರ್ ಮಾಡಿದ್ದಾರೆ. ಅದು ಹೇಳಿದಂತೆಯೇ ನವೆಂಬರ್ 1 ರಂದು ಕೈಸೇರಿದೆ.
ಆದರೆ ಪಾರ್ಸೆಲ್ ತೆರೆದು ನೋಡಿದರೆ ಅವರಿಗೆ ಶಾಕ್ ಆಗಿ ಹೋಯಿತು. ಏಕೆಂದರೆ ಅದರಲ್ಲಿ ಪಾಸ್‍ಪೋರ್ಟ್ ಕವರ್ ಏನೋ ಇತ್ತು, ಜತೆಗೆ ಒರಿಜಿನಲ್ ಪಾಸ್‌ಪೋರ್ಟ್ ಕೂಡ ಇತ್ತು. ತಮ್ಮ ಪಾಸ್‌ಪೋರ್ಟ್ ತಮ್ಮ ಬಳಿಯೇ ಇರುವಾಗ ಇದ್ಯಾವ ಹೊಸ ಪಾಸ್‌ಪೋರ್ಟ್ ಎಂದು ಗಾಬರಿಬಿದ್ದ ಅವರು ಅದನ್ನು ತೆರೆದು ನೋಡಿದಾಗ ಬೇರೆಯವರ ಒರಿಜಿನಲ ಪಾಸ್‌ಪೋರ್ಟ್ ಅದಾಗಿತ್ತು.
ಕೂಡಲೇ ಕಸ್ಟಮರ್ ಕೇರ್‌ಗೆ ಕರೆ ಮಾಡಿದ್ದಾರೆ. ಅವರು ಕ್ಷಮೆ ಕೋರಿದ್ದಾರೆ. ಕೂಡಲೇ ಮಿಥುನ್ ಅವರು ಪಾಸ್‌ಪೋರ್ಟ್ ಮಾಲೀಕ ಯಾರು ಎಂಬುದನ್ನು ಪತ್ತೆ ಹಚ್ಚಿ ಅದನ್ನು ತಲುಪಿಸಿದ್ದಾರೆ. ಪಾಸ್‌ಪೋರ್ಟ್‌ನಲ್ಲಿ ಮೊಬೈಲ್ ಸಂಖ್ಯೆ ಇಲ್ಲದಿದ್ದರೂ ಹರಸಾಹಸ ಪಟ್ಟು ಅದರ ಮಾಲೀಕರಾಗಿರುವ ತ್ರಿಶೂರ್‌ನ ಮೊಹಮ್ಮದ್ ಸಾಲಿಹ್ ಎಂಬುವವರಿಗೆ ತಲುಪಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ ಮೊಹಮ್ಮದ್ ಅವರು ಕೂಡ ಈ ಹಿಂದೆ ಪಾಸ್‌ಪೋರ್ಟ್ ಕವರ್ ಆರ್ಡರ್ ಮಾಡಿದ್ದರು. ಆದರೆ ಅದು ಸರಿ ಕಂಡಿರಲಿಲ್ಲ. ಆದರೆ ಅದನ್ನು ವಾಪಸ್ ಕಳುಹಿಸುವಾಗ ತಮ್ಮ ಪಾಸ್‌ಪೋರ್ಟ್ ಸಹಿತ ಕಳುಹಿಸಿಬಿಟ್ಟಿದ್ದಾರೆ. ಕವರ್ ಅನ್ನು ಈಗ ಮಿಥುನ್ ಅವರು ಆರ್ಡರ್ ಮಾಡಿದ್ದರಿಂದ ಇಬ್ಬರೂ ಕೇರಳಿಗರೇ ಆಗಿದ್ದರಿಂದ ಕೊರಿಯರ್‌ನವರು ಇವರಿಗೇ ಪಾಸ್‌ಪೋರ್ಟ್ ಸಹಿತ ಕಳುಹಿಸಿಬಿಟ್ಟಿದ್ದಾರೆ ಎನ್ನಲಾಗಿದೆ!