HEALTH TIPS

ಸಾಹಿತ್ಯ ಪರಿಷತ್ ಚುನಾವಣೆಗೆ ಎರಡು ದಿನಗಳು ಬಾಕಿ: ಕಣದಲ್ಲಿ ಇಬ್ಬರು ಅಭ್ಯರ್ಥಿಗಳು:

                                         

              ಕುಂಬಳೆ: ಕನ್ನಡ ಭಾಷೆ, ಸಂಸ್ಕøತಿಯ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಎರಡು ದಿನಗಳು ಬಾಕಿ ಉಳಿದಿದ್ದು, ಗಡಿನಾಡು ಕಾಸರಗೋಡಿನಲ್ಲಿ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

                   ಪ್ರಸ್ತುತ ಕಸಾಪ ಅಧ್ಯಕ್ಷರಾಗಿರುವ ಮತ್ತು ಕಳೆದ ನಾಲ್ಕು ಅವಧಿಗಳಿಂದಲೂ ಅಧ್ಯಕ್ಷರಾಗಿರುವ ಎಸ್.ವಿ.ಭಟ್ ಹಾಗೂ ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಪರಸ್ಪರ ಎದುರಾಳಿಗಳಾಗಿದ್ದು ಕಣದಲ್ಲಿರುವರು. 

                ಮೂರು ಅವಧಿ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಅನುಭವ ಇರುವ ಎಸ್.ವಿ. ಭಟ್ ಹಾಗೂ ಗಡಿನಾಡಿನ ಹೋರಾಟ, ಕನ್ನಡ ಭಾಷೆ ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ರಾಧಾಕೃಷ್ಣ ಉಳಿಯತ್ತಡ್ಕ ಕಣದಲ್ಲಿ ಪೈಪೆÇೀಟಿ ನೀಡುತ್ತಿದ್ದಾರೆ.

                   ವೇಗದ ಮತಯಾಚನೆ: ಪ್ರತಿ ಅಭ್ಯರ್ಥಿಯೂ ತಮ್ಮದೇ ಆದ ಮಾರ್ಗದಲ್ಲಿ ಪರಿಷತ್ತಿನ ಸದಸ್ಯರನ್ನು ತಲುಪುವ ಪ್ರಯತ್ನ ನಡೆಸಿದ್ದಾರೆ. ಜಿಲ್ಲೆಯಲ್ಲಿ 550 ರಷ್ಟು ಸದಸ್ಯ ಮತದಾರರಿದ್ದು, ಈ ಪೈಕಿ 400 ರಷ್ಟು ಅಭ್ಯರ್ಥಿಗಳು ಮಾತ್ರ ಮತಹಾಕುವರು. ಮಿಕ್ಕುಳಿದವರು ಪ್ರಸ್ತುತ ವಿವಿಧ ಕಾರಣಗಳಿಂದ ಲಭ್ಯರಿಲ್ಲ. 

                   ತಮ್ಮದೇ ವಲಯ, ಗುಂಪುಗಳ ಮೂಲಕ ಮತಯಾಚನೆ: ಅಭ್ಯರ್ಥಿಗಳು ತಮ್ಮದೇ ವಲಯ, ಗುಂಪು ರಚಿಸಿಕೊಂಡು ಆ ಮೂಲಕವೂ ಮತದಾರರನ್ನು ಸೆಳೆಯುತ್ತಿದ್ದಾರೆ. ಹಿಂದೆ ತಾವೇ ಸದಸ್ಯತ್ವ ಮಾಡಿಸಿದ ಮತದಾರರು, ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡವರ ತಂಡ ಕಟ್ಟಿಕೊಂಡು ತಾಲ್ಲೂಕುವಾರು ಭೇಟಿ ನೀಡಿ ಪ್ರಚಾರ ನಡೆಸುತ್ತಿದ್ದಾರೆ. 

            ಮತದಾನಕ್ಕೆ ಸಂಬಂಧಿಸಿ ಕಾಸರಗೋಡು ಗಡಿನಾಡಿಗೆ ಮತಗಟ್ಟೆಗಳಿಲ್ಲ. ಬದಲಿಗೆ ಅಂಚೆ ಮೂಲಕ ಮತಪತ್ರಗಳನ್ನು ಮತದಾನಗೈದು ಮುಚ್ಚಿ ಕಳಿಸಲಾಗುತ್ತದೆ. ಈಗಾಗಲೇ ಎಲ್ಲಾ ಮತದಾರರೂ ಮತ ಕಳಿಸಿರುವರೆಂದು ತಿಳಿದುಬಂದಿದೆ. ಭಾನುವಾರ ಸಂಜೆಯ ಒ¼ಗೆ ಇಬ್ಬರ ಭವಿಷ್ಯ ನಿರ್ಧಾರವಾಗಲಿದೆ. 

                  ಅಭಿಮತ:

             ಕಾಸರಗೋಡಿನ ಕಸಾಪ ಸದಸ್ಯರೆಂದರೆ ವಿದ್ಯಾವಂತ, ವಿವೇಕಿಗಳಾದ ಪ್ರಬುಧ್ದ ನಾಗರಿಕರು. ನಿರಂತರವಾಗಿ ಕನ್ನಡ ಸಾಹಿತ್ಯ ಸೇವೆ ಮಾಡುತ್ತಿರುವ ನನ್ನ ಸೇವೆ ಗಮನಿಸುತ್ತಿದ್ದಾರೆ. ಜಿಲ್ಲೆಗೆ ಮಾತ್ರವಲ್ಲದೆ ವಯನಾಡು, ಎರ್ನಾಕುಳಂ ನಲ್ಲೂ ಕನ್ನಡ ಡಿಂಡಿಮ ಬೆಳÀಗಿಸಿದ್ದೇವೆ. ಆಡಂಬರ, ಪ್ರಚಾರವಿಲ್ಲದೆ ಕನ್ನಡದ ತೇರು ಎಳೆದಿರುವೆ. ಈ ಕಾರಣದಿಂದ ಮತ್ತೆ ಆಯ್ಕೆ ಮಾಡುವರು ಎಂದು ಭಾವಿಸುವೆ.

                                           -ಎಸ್.ವಿ.ಭಟ್

                                       ಹಾಲಿ ಅಧ್ಯಕ್ಷರು.ಕಸಾಪ ಕೇರಳ ಗಡಿನಾಡ ಘಟಕ ಕಾಸರಗೋಡು ಹಾಗೂ ಪ್ರಸ್ತುತ ಅಭ್ಯರ್ಥಿ

................................................

      ಅಭಿಮತ:

         ಗಡಿನಾಡು ಕಾಸರಗೋಡಿನ ಬಹುಭಾಷಾ ನೆಲೆಯಲ್ಲಿ ಕನ್ನಡ ಭಾಷೆ ಸಂಸ್ಕøತಿಯನ್ನು ಮತ್ತೆ ಪ್ರಬಲಗೊಳಿಸಿ ಅನ್ಯಾಯದ ವಿರುದ್ದ ಧ್ವನಿ ಇನ್ನಷ್ಟು ಬೆಳೆಸಬೇಕಿದೆ. ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಗಳಷ್ಟೇ ಅಲ್ಲದೆ ಸಾಂವಿಧಾನಿಕ ಹಕ್ಕಿನ ಚ್ಯುತಿಗೆ ಎದುರಾಗಿ ಅ|ಂತಹದೇ ದಾರಿಯ ಮೂಲಕ ಕಾನೂನು ಹೋರಾಟಗಳಂತಹ ವಿಸ್ಕøತ ಮಾರ್ಗಗಳನ್ನು ಪ್ರಬಲಗೊಳಿಸಬೇಕಿದೆ. ಭರವಸೆ ಕಳೆದುಕೊಳ್ಳುತ್ತಿರುವ ಇಲ್ಲಿಯ ಕನ್ನಡಿಗರ ಮನೋಸ್ಥೈರ್ಯಕ್ಕೆ ಶಕ್ತಿ ನೀಡುವ ಬಹುಮುಖಿ ಆಯಾಮಗಳ ದೀರ್ಘ ಕಾಲೀನ ಕ್ರಮಗಳಿಗೆ ತಾನು ಕಾರ್ಯನಿರ್ವಹಿಸುವೆ.

                                               -ರಾಧಾಕೃಷ್ಣ ಕೆ.ಉಳಿಯತ್ತಡ್ಕ

                                           ಪತ್ರಕರ್ತ, ಸಾಹಿತಿ(ಅಭ್ಯರ್ಥಿ)


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries