HEALTH TIPS

ವಸಾಹತುಶಾಹಿ ಮನಸ್ಥಿತಿ ಅಸ್ತಿತ್ವದಲ್ಲಿದ್ದು, ದೇಶದ ಅಭಿವೃದ್ಧಿಗೆ ತೊಡಕಾಗಿದೆ: ಪಿಎಂ ಮೋದಿ

Top Post Ad

Click to join Samarasasudhi Official Whatsapp Group

Qries

                ನವದೆಹಲಿ: ವಸಾಹತುಶಾಹಿ ಮನಸ್ಥಿತಿ ಇನ್ನೂ ಅಸ್ತಿತ್ವದಲ್ಲಿದೆ ಮತ್ತು ಇದು ಭಾರತದ ಅಭಿವೃದ್ಧಿಗೆ ತೊಡಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

                ದೆಹಲಿಯ ವಿಜ್ಞಾನ ಭವನದಲ್ಲಿ ಸುಪ್ರೀಂಕೋರ್ಟ್​ನಿಂದ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೆಲವು ಶಕ್ತಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಬೆಳವಣಿಗೆಯ ಹಾದಿಯಲ್ಲಿ ಅಡೆತಡೆಗಳನ್ನು ಹಾಕಲು ಪ್ರಯತ್ನಿಸುತ್ತಿವೆ ಎಂದರು.

            ಪ್ರಪಂಚದಲ್ಲಿ ಯಾವುದೇ ದೇಶವು ಬೇರೆ ದೇಶದ ವಸಾಹತುಶಾಹಿಯಾಗಿ ಅಸ್ತಿತ್ವದಲ್ಲಿಲ್ಲ. ಆದರೆ ವಸಾಹತುಶಾಹಿ ಮನಸ್ಥಿತಿ ಮುಗಿದಿದೆ ಎಂದು ಇದರ ಅರ್ಥವಲ್ಲ. ಈ ಮನಸ್ಥಿತಿಯು ಅನೇಕ ವಿರೂಪಗಳಿಗೆ ಕಾರಣವಾಗುವುದನ್ನು ನಾವು ನೋಡುತ್ತಿದ್ದೇವೆ. ಇದಕ್ಕೆ ಅತ್ಯಂತ ಸ್ಪಷ್ಟವಾದ ಉದಾಹರಣೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಎದುರಾಗುತ್ತಿರುವ ಅಡೆತಡೆಗಳು ಎಂದು ಪ್ರಧಾನಿ ಮೋದಿ ಹೇಳಿದರು.

            ಭಾರತ ಮಾತ್ರ ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಸಾಧಿಸುವ ಹಾದಿಯಲ್ಲಿದೆ. ಪರಿಸರದ ಹೆಸರಲ್ಲಿ ಭಾರತದ ಮೇಲೆ ಹಲವು ಒತ್ತಡಗಳನ್ನು ಸೃಷ್ಟಿಸಲಾಗಿದೆ. ಅವು ಎಲ್ಲವೂ ವಸಾಹತುಸಾಹಿ ಮನಸ್ಥಿತಿಯ ಫಲಿತಾಂಶವಾಗಿದೆ ಎಂದು ಹೇಳಿದರು. 


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries