ಕಾಸರಗೋಡು: ಮಹಿಳೆಯರ, ಬಾಲಕಿಯರ ಮೇಲೆ ನಡೆಯುವ ದೌರ್ಜನ್ಯ , ಲಿಂಗ ತಾರತಮ್ಯ ವಿರುದ್ಧ ರಾಜ್ಯ ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ನಡೆಸುವ "ಆರೆಂಜ್ ದಿ ವಲ್ರ್ಡ್" ಅಭಿಯಾನ ಆರಂಭಗೊಂಡಿದೆ.
ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳಿಗೆ ರೂಪು ನೀಡಲಾಗಿದೆ. ಇದರ ಅಂಗವಾಗಿ ಡಿ.10 ವರೆಗೆ(16 ದಿನಗಳ ಕಾಲ) ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಅಭಿಯಾನದ ಅಂಗವಾಗಿ ಜನಪ್ರತಿನಿಧಿಗಳು, ಧಾರ್ಮಿಕ ಮುಂದಾಳುಗಳು, ರೆಸಿಡೆನ್ಸ್ ಅಸೋಸಿಯೇಶನ್ ಪ್ರತಿನಿಧಿಗಳು, ವಿವಿಧ ಯೂನಿಯನ್ ನೇತಾರರು, ಕಾಲೇಜು ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು, ವಿವಿಧ ಇಲಾಖೆಗಳ ಮುಖ್ಯಸ್ಥರು ಮೊದಲಾದವರು ಭಾಗವಹಿಸುವ ಸಮಾರಂಭಗಳು ನಡೆಯಲಿವೆ.
ವರದಕ್ಷಿಣೆ ನಿಷೇಧ, ಮನೆಗಳಲ್ಲಿ ದೌರ್ಜನ್ಯ ತಡೆ, ಬಾಲ್ಯ ವಿವಾಹ ತಡೆ, ಸಾರ್ವಜನಿಕ ತಾಣಗಳು ನನ್ನದೂ ಹೌದು ಇತ್ಯಾದಿ ವಿಚಾರಗಳಲ್ಲಿ ಹಾಷ್ ಟಾಗ್ ಅಭಿಯಾನ ಜರುಗಲಿದೆ. ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಕೌನ್ಸಿಲರ್ ಗಳು, ಎಂ.ಎಸ್.ಕೆ., ಡಿ.ಡಬ್ಲ್ಯೂ.ಸಿ.ಡಿ.ಒ., ಡಬ್ಲ್ಯೂ.ಪಿ.ಒ., ಡಿ.ಸಿ.ಪಿ.ಒ. ಇತ್ಯಾದಿಗಳ ಮುಖಾಂತರ ಸಾರ್ವಜನಿಕರಲ್ಲಿ, ಯುವಜನತೆಯಲ್ಲಿ, ಹೆಣ್ಣುಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ಜಾಗೃತಿಯುಂಟು ಮಾಡಲು ಹಾಷ್ ಟಾಗ್ ಅಭಿಯಾನ ನಡೆಸಲಾಗುವುದು. ಸೈಕಲ್ ರಾಲಿ, ಸಂವಾದ, ರೇಡಿಯೋ ಪ್ರಚಾರ, ಗೋಡೆ ಚಿತ್ರ ರಚನೆ ಇತ್ಯಾದಿಗಳನ್ನು ನಡೆಸಲಾಗುವುದು.