ಪೆರ್ಲ: ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ದ ಸಂಭ್ರಮದ ಅಂಗವಾಗಿ ಕಾಟುಕುಕ್ಕೆ ಘಟಕದ ನೇತೃತ್ವದಲ್ಲಿ ನಾಳೆ(ಭಾನುವಾರ)ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನ ಪರಿಸರದಲ್ಲಿ ಗುರುವಂದನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 2 ಕ್ಕೆ ಶ್ರೀಕ್ಷೇತ್ರದ ಅರ್ಚಕ ಮಧುಸೂದನ ಪುಣಿಚಿತ್ತಾಯ ದೀಪ ಬೆಳಗಿಸಿ ಉದ್ಘಾಟಿಸುವರು. ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಮತ್ತು ತಂಡದವರಿಂದ ಧನ್ವಂತರಿ ಸ್ತೋತ್ರ ಪಠಣದ ಮೂಲಕ ಚಾಲನೆ ನೀಡಲಾಗುವುದು. 3 ರಿಂದ ಕಾಸರಗೋಡಿನ ಪ್ರಸಿದ್ದ ನಾಟಿವೈದ್ಯರುಗಳಿಂದ ನಾಟಿವೈದ್ಯ-ಪ್ರಸ್ತುತತೆ ವಿಷಯದಲ್ಲಿ ಸಂವಾದ ನಡೆಯಲಿದೆ. ಪದ್ಮನಾಭ ಶೆಟ್ಟಿ ಪೆರ್ಲ, ಶಂಕರ ರೈ ಮಾಸ್ತರ್, ರವಿ ಕಾನ, ಬಾಬು ಪೂಜಾರಿ ಕಾನ, ಶ್ರೀನಿವಾಸ ಆಳ್ವ ಕಳತ್ತೂರು, ನಳಿನಾಕ್ಷಿ ಕುಂಭತ್ತೊಟ್ಟಿ ಭಾಗವಹಿಸುವರು. 3.30 ರಿಂದ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವಿ ಮಾತಾನಂದಮಯೀ ಅವರು ಆಗಮಿಸುವರು. 4ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಾದ್ವಿ ಮಾತಾನಂದಮಯೀ ಉದ್ಘಾ|ಟಿಸಿ ಹನುಮಾನ್ ಚಾಲೀಸ್ ಪಠಣ ನಡೆಯಲಿದೆ. ಷಷ್ಟ್ಯಬ್ದ ಸಂಭ್ರಮ ಸಮಿತಿ ಕಾಟುಕುಕ್ಕೆಯ ಅ|ಧ್ಯಕ್ಷ ನಾರಾಯಣನ್ ಕೆ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಒಡಿಯೂರು ಶ್ರೀಗಳಿಗೆ ಷಷ್ಠ್ಯಬ್ದ ಸಮಿತಿ ಪರವಾಗಿ ಗುರುವಂದನೆ ಹಾಗೂ ತುಳುಲಿಪಿ ಪ್ರಮಾಣ ಪತ್ರ ವಿತರಣೆ ಸಾಧಕರಿಗೆ ಸನ್ಮಾನ ನಡೆಯಲಿದೆ. ಬಿ.ಎಸ್.ಗಾಂಭೀರ್, ಶಶಿಧರ ಕುಮಾರ್ ಪಿ ಶುಭಾಶಂಸನೆಗೈಯ್ಯುವರು. ಧಾರ್ಮಿಕ, ಸಾಮಾಜಿಕ, ಸಹಕಾರಿ ಧುರೀಣ ಸಿ.ಸ0ಜೀವ ರೈ ಅವರನ್ನು ಅಭಿನಂದಿಸಲಾಗುವುದು. ಷಷ್ಠ್ಯಬ್ದ ಸಮಿತಿ ಅಧ್ಯಕ್ಷ ತಾರಾನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡುವರು.