ಪತ್ತನಂತಿಟ್ಟ: ಶಬರಿಮಲೆಯಲ್ಲಿ ಹಲಾಲ್ ಬೆಲ್ಲದ ಬಳಕೆ ವಿರುದ್ಧ ಹೈಕೋರ್ಟ್‍ನಲ್ಲಿ ದೂರು ದಾಖಲಾಗಿದೆ. ಶಬರಿಮಲೆ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ ಎಸ್.ಜೆ.ಆರ್.ಕುಮಾರ್ ಅವರು ದೂರು ದಾಖಲಿಸಿದ್ದಾರೆ. ಶಬರಿಮಲೆಯಲ್ಲಿ ಇತರೆ ಧರ್ಮದ ಸ್ಟ್ಯಾಂಪ್ ಇರುವ ಆಹಾರ ಪದಾರ್ಥಗಳ ಬಳಕೆಯನ್ನು ತಡೆಯುವಂತೆ ದೂರಿನಲ್ಲಿ ಕೋರಲಾಗಿದೆ. ಅಲ್ಲದೆ ಹಲಾಲ್ ಬೆಲ್ಲದಿಂದ ತಯಾರಿಸುವ ಪ್ರಸಾದ ವಿತರಣೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿರುವರು.
ಬಳಸಲು ಯೋಗ್ಯವಲ್ಲದ ಬೆಲ್ಲವನ್ನು ಪ್ರಸಾದ ತಯಾರಿಕೆಗೆ ಬಳಸುವುದು ಗಂಭೀರ ಅಪರಾಧ. ಹರಾಜಿಗೆ ಹೋಗಿರುವ ಬಳಕೆಗೆ ಯೋಗ್ಯವಲ್ಲದ ಬೆಲ್ಲವನ್ನು ವಶಪಡಿಸಿಕೊಂಡು ನಾಶಪಡಿಸಬೇಕು. ಸೇವನೆಗೆ ಯೋಗ್ಯವಲ್ಲ ಎಂದು ಗುರುತಿಸಿ ನಾಶಪಡಿಸಬೇಕು ಎಂಬ ಕಾನೂನು ಇದ್ದರೂ ಆಹಾರ ಸುರಕ್ಷತಾ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಲ್ಲದ ಟೆಂಡರ್ ನಿಯಮದಲ್ಲೂ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.
ಶಬರಿಮಲೆಯಲ್ಲಿ ಅಪ್ಪಂ ಮತ್ತು ಅರವಣ ಪ್ರಸಾದವನ್ನು ತಯಾರಿಸಲು ಹಲಾಲ್ ಬೆಲ್ಲವನ್ನು ಬಳಸಲಾಗುತ್ತಿತ್ತು. ಗೋದಾಮಿನಿಂದ ಬೆಲ್ಲವನ್ನು ಹೊರತೆಗೆದಾಗ, ಅದರ ಮೇಲೆ ಇಂಗ್ಲಿಷ್‍ನಲ್ಲಿ 'ಹಲಾಲ್' ಎಂದು ಬರೆದಿರುವುದು ಕಂಡುಬಂದಿದೆ. ಬೆಲ್ಲದ ಗುತ್ತಿಗೆಯನ್ನು ಕಳೆದ ವರ್ಷ ದೇವಸ್ವಂ ಮಂಡಳಿ ನೀಡಿತ್ತು. ಮತ್ತು ಅದರ ಮುಕ್ತಾಯ ದಿನಾಂಕದ ಬಳಿಕ ಮರಳಿ ನವೀಕರಿಸಲಾಗಿದೆ. ಶಬರಿಮಲೆಯಲ್ಲಿ ಹಲಾಲ್ ಬೆಲ್ಲದ ಬಳಕೆ ವಿರೋಧಿಸಿ ಹಿಂದೂ ಐಕ್ಯವೇದಿ ಪ್ರತಿಭಟನೆ ನಡೆಸುತ್ತಿದೆ.
ಐಕ್ಯವೇದಿ ಅಧ್ಯಕ್ಷೆ ಕೆ.ಪಿ.ಶಶಿಕಲಾ ಟೀಚರ್ ಮಾತನಾಡಿ, ಹಲಾಲ್ ಮಾರ್ಕಿನ ಬೆಲ್ಲ ಬಳಸಿ ಪ್ರಸಾದ ತಯಾರಿಸುವುದು ಭಕ್ತರಿಗೆ ಹಾಗೂ ದೇವರಿಗೆ ಸವಾಲಾಗಿದೆ. ಈ ಬಗ್ಗೆ ದೇವಸ್ವಂ ಮಂಡಳಿ ವಿವರಣೆ ನೀಡಬೇಕು. ಈ ಗಂಭೀರ ಅಪರಾಧವನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಂತಹ ಬೆಲ್ಲ ಬಳಸಿದ್ದರಿಂದ ಅಥವಾ ಪೂಜೆ ಮಾಡಿದ್ದರಿಂದ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ಶಶಿಕಲಾ ಟೀಚರ್ ಹೇಳಿದ್ದರು.
ಇದೇ ವೇಳೆ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಎನ್.ವಾಸು ಕೂಡ ಪ್ರತಿಕ್ರಿಯಿಸಿ ಶಬರಿಮಲೆಯಲ್ಲಿ ಹಲಾಲ್ ಬೆಲ್ಲ ಬಳಸಿರುವುದನ್ನು ಒಪ್ಪಿಕೊಂಡಿದ್ದಾರೆ. ಬೆಲ್ಲವನ್ನು 2019 ರಿಂದ ಬಳಸಲಾಗುತ್ತಿದೆ. ಮಹಾರಾಷ್ಟ್ರ ಮೂಲದ ವರ್ಧನ್ ಎಂಬ ಖಾಸಗಿ ಕಂಪನಿ ಬೆಲ್ಲವನ್ನು ವಿತರಿಸಿದೆ. ಬೇರೆ ದೇಶಗಳಿಗೆ ರಫ್ತು ಮಾಡಲು ಬೆಲ್ಲದ ಮೇಲೆ ಹಲಾಲ್ ಸ್ಟಾಂಪ್ ಅಂಟಿಸಲಾಗಿದೆ ಎಂದು ಎನ್ ವಾಸು ಮಾಧ್ಯಮಗಳಿಗೆ ತಿಳಿಸಿದ್ದಾರೆ.