ಕಾಸರಗೋಡು: ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಮಕ್ಕಳಿಗಾಗಿ ಆಯುರ್ವೇದ ಕೋವಿಡ್ ರೋಗ ಪ್ರತಿರೋಧ ಕಿರಣಂ ಯೋಜನೆಯ ಜಿಲ್ಲಾಮಟ್ಟದ ಉದ್ಘಾಟನೆ ಅಜನೂರ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜರುಗಿತು.
ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ. ಮಣಿಕಂಠನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭಾರತದ ಆಯುರ್ವೇದ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿದ್ದು, ಮುಂದಿನ ತಲೆಮಾರಿಗೆ ಆಯುರ್ವೇದದ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸ ನಡೆದುಬರಬೇಕಾಗಿದೆ ಎಂದು ತಿಳಿಸಿದರು. ಅಜನೂರ್ ಗ್ರಾಪಂ ಅಧ್ಯಕ್ಷೆ ಪಿ.ಶೋಭಾ ಅಧ್ಯಕ್ಷತೆ ವಹಿಸಿದ್ದರು. ಆಯುರ್ವೇದ ಜಿಲ್ಲಾ ವೈದ್ಯಾಧಿಕಾರಿ ಡಾ. ಜೋಮಿ ಜೋಸೆಫ್ ಮುಖ್ಯ ಅತಿಥಿಯಾಘಿದ್ದರು. ಗ್ರಾಪಂ ಉಪಾಧ್ಯಕ್ಷ ಕೆ.ಸಬೀಶ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ಕೆ.ಮೀನಾ, ಶೀಬಾ ಉಮ್ಮರ್, ಗ್ರಪಂ ಸದಸ್ಯ ಅಜಿತ್ ಕುಮಾರ್, ಡಾ. ಕೆ. ವಿಜಯಕುಮಾರ್, ಡಾ. ಟಿ.ಪಿ ರಮಿಲಾ ಉಪಸ್ಥಿತರಿದ್ದರು.