ಬದಿಯಡ್ಕ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಾಲಕೃಷ್ಣ ಸಿಎಚ್ ಬಾರಡ್ಕ ಚಿಕಿತ್ಸಾ ಸಹಾಯನಿಧಿ ಸಮಿತಿ ನೇತೃತ್ವದಲ್ಲಿ ಫಂಡ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಎಡನೀರು ಮಠದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಜಿಗಳವರ ಅನುಗ್ರಹ ಆಶೀರ್ವಾದದೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಮಿತಿಯ ಅಧ್ಯಕ್ಷ ಮಾಹಿನ್ ಕೇಳೊಟ್, ಕಾರ್ಯಾಧ್ಯಕ್ಷ ನಿರಂಜನ್ ರೈ ಪೆರಡಾಲ, ಪ್ರಧಾನ ಸಂಚಾಲಕ ಜಯರಾಮ ಕುಂಟಾಲಮೂಲೆ, ಜನಪ್ರತಿನಿಧಿ ಈಶ್ವರ ಮಾಸ್ತರ್, ಪದಾಧಿಕಾರಿಗಳಾದ ಹರೀಶ್ ನಾರಂಪಾಡಿ, ನ್ಯಾಯವಾದಿ ಗಣೇಶ್ ಬದಿಯಡ್ಕ, ಅಖಿಲೇಶ್ ಯಾದವ್, ಶ್ಯಾಂಪ್ರಸಾದ್ ಮಾನ್ಯ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಾಲಕೃಷ್ಣ ದಂಪತಿಗಳು ಉಪಸ್ಥಿತರಿದ್ದರು.
ಎರಡು ಕಿಡ್ನಿ ಕಳೆದುಕೊಂಡಿರುವ ಬಾಲಕೃಷ್ಣ ಅವರಿಗೆ ಕಿಡ್ನಿ ನೀಡಲು ಪ್ರಾಯೋಜಕರು ಮುಂದಾಗಿದ್ದಾರೆ. ಸುಮಾರು 30 ಲಕ್ಷ ರೂ ಖರ್ಚು ತಗುಲಬಹುದು ಎಂದು ಅಂದಾಜಿಸಲಾಗಿದೆ ಉದಾರ ದಾನಿಗಳ ಸಹಾಯ ನಿರೀಕ್ಷಿಸಲಾಗಿದೆ. ಕೆನರಾ ಬ್ಯಾಂಕ್ ಬದಿಯಡ್ಕ ಶಾಖೆ, ಖಾತೆ=110021128630, ಐಎಫ್ ಸಿ ಸಂಖ್ಯೆ ಸಿ.ಎನ್.ಆರ್.ಬಿ.0004489 ಬಾಲಕೃಷ್ಣ ಸಿಎಚ್ ಬಾರಡ್ಕ, ಚೇರ್ಕೂಡ್ಲು, ಮೆಡಿಕಲ್ ಆಡ್ ಕಮಿಟಿ, ಗೂಗಲ್ ಪೇ ನಂಬರ್-9496016312 ದಾನಿಗಳು ನೆರವು ನೀಡಬಹುದು.