ಬದಿಯಡ್ಕ: ಬೇಳ ಸಂತ ಬಾರ್ತಲೋಮಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲಾ ಪ್ರವೇಶೋತ್ಸವ ನಡೆಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ, ಬ್ಲಾಕ್ ಪಂಚಾಯತಿ ಸದಸ್ಯರೂ ಆದ ಸುಕುಮಾರ ಕುದ್ರೆಪ್ಪಾಡಿ ಅ|ಧ್ಯಕ್ಷತೆ ವಹಿಸಿ ಮಾತನಾಡಿ, ಸುಧೀರ್ಘ ಅವಧಿಯ ಬಳಿಕ ಶಾಲಾರಂಭಗೊಳ್ಳುತ್ತಿರುವುದು ಸಂತಸಕರ. ಕೋವಿಡ್ ಜಾಗ್ರತೆಯೊಂದಿಗೆ ಮಕ್ಕಳ ತರಗತಿ ಶಿಕ್ಷಣ ಮುಂದುವರಿಸಬೇಕಾಗಿದೆ. ಶಿಕ್ಷಣದ ಸಾಕಾರತೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಮದು ತಿಳಿಸಿದರು.
ಬ್ಲಾಕ್ ಪಂಚಾಯತಿ ಸದಸ್ಯೆ ಜಯಂತಿ, ಗ್ರಾ.ಪಂ.ಸದಸ್ಯ ಶಂಕರ ಡಿ., ಶಾಲಾ ಸಂಚಾಲಕಿ ಸಿಸ್ಟರ್ ಕಾರ್ಮಿನ್ ಪಿರೇರಾ ಉಪಸ್ಥಿತರಿದ್ದು ಶುಭಹಾರೈಸಿದರು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅಶ್ವಿನಿ ಸ್ವಾಗತಿಸಿ, ವಂದಿಸಿದರು. ಪಿಟಿಎ ಉಪಾಧ್ಯಕ್ಷ ಮೈಕೆಲ್ ಉಪಸ್ಥಿತರಿದ್ದರು.