ಕಾಸರಗೋಡು: ಅಡುಗೆ ಅನಿಲ ಬೆಲೆಯೇರಿಕೆ ವಿರೋಧಿಸಿ ಹೋಟೆಲ್ ಏಂಡ್ ರೆಸ್ಟಾರೆಂಟ್ ಅಸೋಶಿಯೇಶನ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಮುಖ್ಯ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಕೇರಳ ಹೋಟೆಲ್ ಏಂಡ್ ರೆಸ್ಟಾರೆಂಟ್ ಅಸೋಸಿಯೇಶನ್ ಜಿಲ್ಲಾ ಸಮಿತಿ ಕಾರ್ಯದರ್ಶಿ ನಾರಾಯಣ ಪೂಜಾರಿ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ದುಲ್ಲ ತಾಜ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಯೂಸುಫ್ ಹಾಜಿ, ಮಹಮ್ಮದ್ ಗಜಾಲಿ, ಸತ್ಯನಾಥ್ ಇರಿಯಣ್ಣಿ, ವಸಂತ ಮುಂತಾವರು ನೇತೃತ್ವ ನೀಡಿದರು. ಜಿಲ್ಲಾ ಸಮಿತಿ ಕೋಶಾಧಿಕಾರಿ ರಆಜನ್ ಕಳಕ್ಕರ ಸ್ವಾಗತಿಸಿದರು. ಕಾರ್ಯದರ್ಶಿ ಅಜೇಶ್ ನುಳ್ಳಿಪ್ಪಾಡಿ ವಂದಿಸಿದರು. ಪ್ರತಿಭಟನೆ ಪೂರ್ವಭಾವಿಯಾಗಿ ಅಡುಗೆ ಅನಿಲ ಜಾಡಿಯೊಂದಿಗೆ ನಡೆಸಲಾದ ಮೆರವಣಿಗೆಯಲ್ಲಿ ಹಲವು ಮಂದಿ ಹೋಟೆಲ್ ಮಾಲಿಕರು ಪಾಲ್ಗೊಂಡಿದ್ದರು.