ಸಾಮಾಜಿಕ ಮಾಧ್ಯಮಗಳಲ್ಲಿ ನಾಸಾ ಸೆರೆಹಿಡಿದಿದೆ ಎನ್ನಲಾಗ್ತಿರುವ ದೀಪಾವಳಿ ಫೋಟೋವೊಂದು ಸಿಕ್ಕಪಟ್ಟೆ ವೈರಲ್ ಆಗ್ತಿದೆ. ದೀಪಾವಳಿ ಪ್ರಯುಕ್ತ ಈ ಪ್ರಕಾಶಮಾನವಾದ ಭಾರತದ ರಾತ್ರಿ ನೋಟವನ್ನ ನಾಸಾ ಸೆರೆ ಹಿಡಿದಿದೆ ಎಂದು ಬರೆಯಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ನಾಸಾ ಸೆರೆಹಿಡಿದಿದೆ ಎನ್ನಲಾಗ್ತಿರುವ ದೀಪಾವಳಿ ಫೋಟೋವೊಂದು ಸಿಕ್ಕಪಟ್ಟೆ ವೈರಲ್ ಆಗ್ತಿದೆ. ದೀಪಾವಳಿ ಪ್ರಯುಕ್ತ ಈ ಪ್ರಕಾಶಮಾನವಾದ ಭಾರತದ ರಾತ್ರಿ ನೋಟವನ್ನ ನಾಸಾ ಸೆರೆ ಹಿಡಿದಿದೆ ಎಂದು ಬರೆಯಲಾಗಿದೆ.
ಆದ್ರೆ, ಇದೊಂದು ಗ್ರಾಫಿಕಲ್ ಚಿತ್ರವಾಗಿದ್ದು, ಇದು ನಕಲಿ ದೀಪಾವಳಿ ಚಿತ್ರವಾಗಿದೆ.
ಇದಕ್ಕೆ ಸ್ಪಷ್ಟನೆ ನೀಡಿರುವ ನಾಸಾ, ನಿಜವಾದ ಚಿತ್ರವನ್ನ ಯುಎಸ್ ರಕ್ಷಣಾ ಹವಾಮಾನ ಉಪಗ್ರಹ ಕಾರ್ಯಕ್ರಮ (DMSP) ತೆಗೆದುಕೊಂಡಿದೆ, ಇದು ನಗರದ ದೀಪಗಳ ಸಹಾಯದಿಂದ ಜನಸಂಖ್ಯೆಯ ಬೆಳವಣಿಗೆಯನ್ನ ತೋರಿಸುತ್ತದೆ. ಬಿಳಿ ಪ್ರದೇಶಗಳು 1992ರ ಮೊದಲು ಗೋಚರಿಸುತ್ತಿದ್ದ ನಗರ ದೀಪಗಳನ್ನು ಸೂಚಿಸುತ್ತವೆ, ಮತ್ತು ನೀಲಿ, ಹಸಿರು ಮತ್ತು ಕೆಂಪು ಪ್ರದೇಶಗಳು ಕ್ರಮವಾಗಿ 1992, 1998 ಮತ್ತು 2003 ರಲ್ಲಿ ಕಾಣಿಸಿಕೊಂಡವುಗಳನ್ನ ತೋರಿಸುತ್ತವೆ. ಈ ಚಿತ್ರವು ವಾಸ್ತವವಾಗಿ ಬಣ್ಣ-ಸಂಯೋಜಿತವಾಗಿದೆ, ಕಾಲಾನಂತರದಲ್ಲಿ ಜನಸಂಖ್ಯೆಯ ಬೆಳವಣಿಗೆಯನ್ನ ಎತ್ತಿ ತೋರಿಸಲು ಎನ್ ಒಎಎ ವಿಜ್ಞಾನಿ ಕ್ರಿಸ್ ಎಲ್ವಿಡ್ಜ್ 2003ರಲ್ಲಿ ರಚಿಸಿದರು.
ಆದಾಗ್ಯೂ, ನಾಸಾ ದೀಪಗಳ ಹಬ್ಬದ ನಿಜವಾದ ಚಿತ್ರವನ್ನ ಟ್ವಿಟರ್ʼನಲ್ಲಿ ಹಂಚಿಕೊಂಡಿದೆ. '23 ನವೆಂಬರ್ 2012 ರಂದು, ಸುವೋಮಿ ಎನ್ ಪಿಪಿ ಉಪಗ್ರಹದ ವಿಸಿಬಲ್ ಇನ್ಫ್ರಾರೆಡ್ ಇಮೇಜಿಂಗ್ ರೇಡಿಯೋಮೀಟರ್ ಸೂಟ್ (VIIRS) ದಕ್ಷಿಣ ಏಷ್ಯಾದ ಈ ರಾತ್ರಿಯ ನೋಟವನ್ನು ಸೆರೆಹಿಡಿದಿದೆ' ಎಂದು ನಾಸಾ ಚಿತ್ರವನ್ನು ಬಿಡುಗಡೆ ಮಾಡಿದೆ ಎಂದು ಹೇಳಿದೆ.
ಈ ಚಿತ್ರವನ್ನು ನಾಸಾದ ಸುವೋಮಿ ಎನ್ ಪಿಪಿ ಉಪಗ್ರಹ ಸೆರೆಹಿಡಿದಿದೆ. ನಾಸಾದ ವೆಬ್ ಸೈಟ್ ಹೇಳುವಂತೆ, 'ಈ ಚಿತ್ರವು ವಿಐಐಆರ್ʼಗಳು ಸಂಗ್ರಹಿಸಿದ ದತ್ತಾಂಶವನ್ನ ಆಧರಿಸಿದೆ 'ಡೇ-ನೈಟ್ ಬ್ಯಾಂಡ್,' ಇದು ಹಸಿರು ಬಣ್ಣದಿಂದ ಹತ್ತಿರದ ಇನ್ಫ್ರಾರೆಡ್ʼವರೆಗೆ ತರಂಗಾಂತರಗಳ ಶ್ರೇಣಿಯಲ್ಲಿ ಬೆಳಕನ್ನ ಪತ್ತೆಹಚ್ಚುತ್ತದೆ'.