ಮುಳ್ಳೇರಿಯ: ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಲ್ಲಕಟ್ಟ ಅರ್ತಲೆಯ ಎಂ.ಪರಮೇಶ್ವರ ನಾಯ್ಕ ಅವರ ಭಕ್ತಿ-ನೀತಿ ಕವನಗಳ ಸಂಕಲನ ತೀರ್ಥಾಮೃತ ಕೃತಿ ಬಿಡುಗಡೆಗೊಂಡಿತು.
ಕೋಟೆಕಣಿಯ ಶ್ರೀ ರಾಮಾನಾಥ ಸಾಂಸ್ಕøತಿಕ ಭವನ ಸಮಿತಿ ಪ್ರಕಟಿಸಿದ ತೀರ್ಥಾಮೃತ ಕೃತಿಯನ್ನು ಮಲ್ಲ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅವರು ಕೃತಿಕಾರರಾದ ಎಂ.ಪರಮೇಶ್ವರ ನಾಯ್ಕ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ, ಸಂಘಟಕ ಜಗದೀಶ್ ಕೂಡ್ಲು ಕೆ, ಯೋಗೀಶ್ ಕೋಟೆಕಣಿ, ಶ್ರೀಕಾಂತ್ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.