ಕಣ್ಣೂರು: ಆರೆಸ್ಸೆಸ್ ಸ್ವಯಂಸೇವಕ ಸಂಜಿತ್ ಹತ್ಯೆಯ ನಂತರ ಕಣ್ಣೂರು ಜಿಲ್ಲೆಯಲ್ಲಿ ಎಸ್‍ಡಿಪಿಐ ಭಯೋತ್ಪಾದಕ ಚಟುವಟಿಕೆಗಳನ್ನು ಹರಡಲು ಯತ್ನಿಸುತ್ತಿದೆ ಎಂದು ಸಂದೀಪ್ ವಾಚಸ್ಪತಿ ಹೇಳಿದ್ದಾರೆ. ಕಳೆದ ದಿನ ಇರಿಟ್ಟಿಯಲ್ಲಿ ನಡೆದ ಪ್ರತಿಭಟನೆ ಇದನ್ನೇ ಸೂಚಿಸುತ್ತದೆ. ಎಸ್‍ಡಿಪಿಐ ಪ್ರತಿಭಟನೆಯಲ್ಲಿ ಮೊಳಗಿದ ಘೋಷಣೆ ಸಿಪಿಎಂನದು ಎಂದು ಅವರು ಬೊಟ್ಟುಮಾಡಿದರು.
ಧಾರ್ಮಿಕ ಉಗ್ರಗಾಮಿ ಸಂಘಟನೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಿಐಟಿಯು ಹಾಗೂ ಸಿಪಿಎಂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಿಪಿಎಂ ಪ್ರದೇಶ ಸಮಿತಿ ಹಾಗೂ ಜಿಲ್ಲಾ ನಾಯಕತ್ವ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಇಡೀ ಸಮಾಜವನ್ನು ಕಿತ್ತು ತಿನ್ನುತ್ತಿರುವ ಅತ್ಯಂತ ಅಪಾಯಕಾರಿ ಧಾರ್ಮಿಕ ಉಗ್ರವಾದ ಪ್ರತ್ಯೇಕತಾವಾದಿ ಮತ್ತು ವಿಧ್ವಂಸಕ ಶಕ್ತಿಗಳೊಂದಿಗಿನ ಸಂಪರ್ಕದಿಂದ ಸಿಪಿಎಂ ಹಿಂದೆ ಸರಿಯಬೇಕು ಎಂದು ಸಂದೀಪ್ ಹೇಳಿದರು.
ಆರ್‍ಎಸ್‍ಎಸ್ ಕಣ್ಣೂರು ವಿಭಾಗದ ಕಾರ್ಯಕಾರಿ ಸದಸ್ಯ ಸಜೀವನ್ ಅರಳಂ ಅವರ ಮನೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಪಾಪ್ಯುಲರ್ ಫ್ರಂಟ್ ಮತ್ತು ಎಸ್‍ಡಿಪಿಐ ವದಂತಿ ಹಬ್ಬಿಸುತ್ತಿದೆ. ಆದರೆ, ಇದು ಕೋತಿಯನ್ನು ದೂರ ಇಡಲು ಬಳಸಿದ ಪಿವಿಸಿ ಏರ್ ಗನ್ ಎಂಬುದು ಪೋಲೀಸರ ತನಿಖೆಯಿಂದ ತಿಳಿದುಬಂದಿದೆ ಎಂದು ಸಂದೀಪ್ ವಾಚಸ್ಪತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.