HEALTH TIPS

ಲಸಿಕೆ ಸ್ಥಿತಿ ಪರಿಶೀಲನೆ ಸರಳ: ಕೋವಿನ್​ಗೆ ಹೊಸ ಫೀಚರ್; ಸಾರ್ವಜನಿಕ ಬಳಕೆಗೆ ಲಭ್ಯ..

            ನವದೆಹಲಿ: ಲಸಿಕೆ ಹಾಕಿಸಿಕೊಂಡಿರುವ ಸ್ಥಿತಿಗತಿ ಅರಿಯಲು ಕೋವಿನ್ ವೇದಿಕೆಯಲ್ಲಿ ಹೊಸ ಫೀಚರ್ ಅಳವಡಿಸಲಾಗಿದ್ದು, ಅದರಿಂದ ಬಹಳಷ್ಟು ವಿಭಾಗಗಳಿಗೆ ನೆರವಾಗಲಿದೆ. ಲಸಿಕೆಯ ಒಂದು ಡೋಸ್,ಅಂದರೆ ಭಾಗಶಃ ಪಡೆಯಲಾಗಿದೆಯೇ ಅಥವಾ ಎರಡೂ ಡೋಸ್, ಅಂದರೆ ಸಂಪೂರ್ಣವಾಗಿ ಪಡೆಯಲಾಗಿದೆಯೇ ಎಂಬುದನ್ನು ಇನ್ನು ಮುಂದೆ ಕೋವಿನ್ ಪ್ಲಾಟ್​ಫಾರಂ ಮೂಲಕವೇ ತಿಳಿಯಬಹುದು.

               ಕಚೇರಿಗಳು, ಚಿತ್ರ ಮಂದಿರಗಳು, ಹೋಟೆಲ್​ಗಳು, ರೆಸ್ಟೋರೆಂಟ್​ಗಳು, ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಸಾರ್ವಜನಿಕ ಸೇವೆ ಒದಗಿಸುವ ಇತರ ಸಂಸ್ಥೆಗಳು ಈ ಸಾಧನವನ್ನು ಬಳಸಬಹುದಾಗಿದೆ. ಗ್ರಾಹಕರು ಮತ್ತು ಸಂದರ್ಶಕರು ಲಸಿಕೆ ಹಾಕಿಸಿಕೊಂಡಿರುವ ಸ್ಥಿತಿಯನ್ನು ಕೋವಿನ್ ಟೂಲ್ ತಿಳಿಸುತ್ತದೆ. 'ನಿಮ್ಮ ಲಸಿಕೆ ಸ್ಟೇಟಸ್ ತಿಳಿಯಿರಿ' ಎನ್ನುವುದು ಹೊಸ ಫೀಚರ್​ನ ಹೆಸರು. ಕೋವಿನ್/ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದೃಢೀಕೃತ ಪರಿಶೀಲನಾ ಹಕ್ಕುಗಳನ್ವಯ ಲಸಿಕೆ ಹಾಕಿಸಿಕೊಂಡ ಸ್ಥಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.

             ಹೊಸ ಫೀಚರ್ ಬಳಕೆ ಹೇಗೆ?: ಕೋವಿನ್ ವೇದಿಕೆಯಲ್ಲಿ ಹೊಸ ಫೀಚರ್ ಅಳವಡಿಸಲಾಗಿದೆ. ಯಾರದ್ದೇ ವ್ಯಾಕ್ಸಿನ್ ಸ್ಟೇಟಸ್ ತಿಳಿಯಲು ಅದನ್ನು ನಾಗರಿಕರು ಬಳಸಬಹು ದಾಗಿದೆ. ಆದರೆ, ಯಾರನ್ನು ಗುರಿಯಾಗಿಸಿ ಅದನ್ನು ಬಳಸಲಾಗುತ್ತದೋ ಬಳಸಲು ಅವರ ಅನುಮತಿ ಪಡೆಯಬೇಕಾಗುತ್ತದೆ. ಸ್ಟೇಟಸ್ ತಿಳಿಯಲು ಬಯಸಿದ ವ್ಯಕ್ತಿಯ ನೋಂದಾಯಿತ ಫೋನ್ ಸಂಖ್ಯೆ ಹಾಗೂ ಹೆಸರು ಅಗತ್ಯವಾಗುತ್ತದೆ. ವ್ಯಕ್ತಿ ತನ್ನ ಮೊಬೈಲ್​ನಲ್ಲಿ ಬಂದ ಒಟಿಪಿಯನ್ನು ಲಸಿಕೆ ಸ್ಥಾನಮಾನ ತಿಳಿಯ ಬಯಸಿದ ವ್ಯಕ್ತಿಗೆ ನೀಡಬೇಕು.

                 ಯಾರು ಬಳಸಬಹುದು?: ಟ್ರಾವೆಲ್ ಏಜೆನ್ಸಿಗಳು, ಕಚೇರಿಗಳು, ಮನೋರಂಜನಾ ಸಂಸ್ಥೆಗಳು ಮುಂತಾದ ಖಾಸಗಿ ಸಂಸ್ಥೆಗಳು, ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ಸಂಸ್ಥೆ, ಸರ್ಕಾರಿ ಕಚೇರಿಗಳು ಮೊದಲಾದವು ಈ ಸೇವೆಯನ್ನು ಬಳಸಬಹುದಾಗಿದೆ ಎಂದೂ ಸರ್ಕಾರ ತಿಳಿಸಿದೆ.

              115 ಕೋಟಿ ಡೋಸ್: ದೇಶದಲ್ಲಿ ಇದುವರೆಗೆ 115 ಕೋಟಿ ಡೋಸ್ ಕರೊನಾ-ತಡೆ ಲಸಿಕೆ ಹಾಕಲಾಗಿದೆ. 39.1 ಕೋಟಿ ಜನರು ಎರಡೂ ಡೋಸ್ ಲಸಿಕೆ ಪಡೆದಿದ್ದು ಅವರ ಪ್ರಮಾಣ ಶೇಕಡ 28.4 ಆಗಿದೆ.

             532 ದಿನಗಳಲ್ಲಿ ಕನಿಷ್ಠ ಸಕ್ರಿಯ ಪ್ರಕರಣ: ದೇಶದಾದ್ಯಂತ ಭಾನುವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ಕರೊನಾ ಸೋಂಕಿನ 10,488 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 3,45,1,413ಕ್ಕೆ ಏರಿದೆ. 313 ಜನರು ಒಂದು ದಿನದಲ್ಲಿ ಮೃತಪಟ್ಟಿದ್ದು ಒಟ್ಟು 4,65,662 ರೋಗಿಗಳು ವ್ಯಾಧಿಗೆ ಬಲಿಯಾಗಿದ್ದಾರೆ. ದೇಶದ ಕೋವಿಡ್ ಸೋಂಕಿನ ಸಕ್ರಿಯ ಕೇಸ್​ಗಳು 1,22,714ಕ್ಕೆ ಇಳಿದಿದ್ದು ಇದು ಕಳೆದ 532 ದಿನಗಳಲ್ಲಿ ಅತ್ಯಂತ ಕನಿಷ್ಠ ಸಕ್ರಿಯ ಪ್ರಕರಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೈನಿಕ ಸೋಂಕಿನ ಪ್ರಕರಣಗಳು ಸತತ 44 ದಿನ 20 ಸಾವಿರಕ್ಕಿಂತ ಕಡಿಮೆಯಿದೆ. 147 ದಿನಗಳಿಂದ 50 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗುತ್ತಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries