ವಯನಾಡು: ಚಿನ್ನ ಅರಸಿ ಮಣ್ಣು, ಕಲ್ಲು, ಬಂಡೆಗಳನ್ನು ಅಗೆಯಲು ದೇವಲ ಅರಣ್ಯಕ್ಕೆ ಬರುವವರ ವಿರುದ್ಧ ತಮಿಳುನಾಡು ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ವಯನಾಡು ಗಡಿಗೆ ಸಮೀಪವಿರುವ ಪಂತ್ತಲ್ಲೂರು ತಾಲೂಕಿನ ಸುತ್ತಮುತ್ತಲಿನ ದೇವಲ ಅರಣ್ಯ ಪರಿಸರದÀಗಳಿಗೆ ಚಿನ್ನ ಹುಡುಕಿಕೊಂಡು ಜನರು ಬರುತ್ತಾರೆ. ಚಿನ್ನದ ಗಣಿಗಾರರ ಪತ್ತೆಗೆ ಡ್ರೋನ್ ಕ್ಯಾಮೆರಾ ಮೂಲಕ ಶೋಧ ಕಾರ್ಯ ಆರಂಭವಾಗಿದೆ. ಈಗಾಗಲೇ ನಾಲ್ವರನ್ನು ಅರಣ್ಯ ಇಲಾಖೆ ಬಂಧಿಸಿದೆ. ಇವರಿಂದ 40 ಸಾವಿರ ರೂ. ದಂಡ ವಸೂಲುಮಾಡಲಾಗಿದೆ.
ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಕೇರಳದ ವಿದ್ಯಾವಂತ ಯುವಕರು ನಿಧಿ ಹುಡುಕುತ್ತಿದ್ದಾರೆ ಎನ್ನುತ್ತಾರೆ ತಮಿಳುನಾಡು ಅರಣ್ಯ ಇಲಾಖೆ ಅಧಿಕಾರಿಗಳು. ಚಿನ್ನ ಹುಡುಕಲು ಆಗಮಿಸುವವರು ದೊಡ್ಡ ಹೊಂಡ ಮತ್ತು ಸುರಂಗಗಳನ್ನು ತೆರೆಯುತ್ತಿದ್ದು ಇದಕ್ಕೆ ವನ್ಯ ಪ್ರಾಣಿಗಳು ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವುದೂ ಕಂಡುಬರುತ್ತಿದೆ.
ಅರಣ್ಯಕ್ಕೆ ತೆರಳುವ ಎಲ್ಲಾ ರಸ್ತೆಗಳಲ್ಲಿ ರೇಂಜರ್‍ಗಳ ತಂಡವು ಕಾವಲು ಕಾಯುತ್ತಿದೆ. ಅರಣ್ಯ ಪ್ರದೇಶಗಳಲ್ಲೂ ಥಂಡರ್ ಬೋಲ್ಟ್ ಮಾನಿಟರಿಂಗ್ ಅಳವಡಿಸಲಾಗಿದೆ.
ಈ ಹಿಂದೆ ಕೇರಳದಿಂದ ಅನೇಕ ಭೂಮಾಲೀಕರು ಚಿನ್ನ ಅಗೆಯಲು ಬಂದಿದ್ದರು. ವಯನಾಡಿನಲ್ಲಿ ಆ ಕಾಲದಲ್ಲಿ ಮೆಪ್ಪಾಡಿ ಮತ್ತು ತಾರಿಯಲ್ಲಿ ಚಿನ್ನದ ಗಣಿಗಳಿದ್ದವು. 1798 ರಲ್ಲಿ, ಬಾಂಬೆ ಸರ್ಕಾರವು ಮೆಪ್ಪಾಡಿಯಲ್ಲಿ ಚಿನ್ನದ ಗಣಿಗಾರಿಕೆಗೆ ಅಧಿಕಾರಿಗಳನ್ನು ಕಳುಹಿಸಿತು. ಆದರೆ ಈಗ ಪ್ರಾಣಿಗಳು ಅಥವಾ ಮನುಷ್ಯರು ಸುರಂಗಗಳಲ್ಲಿ ಬಿದ್ದಾಗ ಮಾತ್ರ ಉತ್ಖನನ ಸಾಧ್ಯ. ನಿಧಿಯನ್ನು ಹುಡುಕುವ ಅನೇಕರು ಸಾಮಾನ್ಯವಾಗಿ ಬರಿಗೈಯಲ್ಲಿ ಹಿಂದಿರುಗುತ್ತಾರೆ ಎಂಬುದು ಸತ್ಯ.