ಕಾಸರಗೋಡು: ಹವಾಮಾನ ವೈಪರೀತ್ಯದ ಕಾರಣ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಕಾಸರಗೋಡು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಶಿಸಿದ್ದು, ನಾಳೆ(ಸೋಮವಾರ) ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಜಿಲ್ಲಾಧಿಕಾರಿಗಳು ರಜೆ ಸಾರಲಾಗಿದೆ. ಆದರೆ ಕಾಲೇಜುಗಳಿಗೆ ರಜೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ತಿಳಿಸಿದ್ದಾರೆ.
ಪ್ರಾಥಮಿಕ ವರದಿಯ ಪ್ರಕಾರ ಮಂಗಳವಾರದ ವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಎಲ್ಲೆಡೆ ಭಾರೀ ಜಾಗ್ರತೆ ಪಾಲಿಸಬೇಕೆಮದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮುನ್ನೆಚ್ಚರಿಕೆ ನೀಡಿದ್ದಾರೆ.
ಕಾಸರಗೋಡು ಅಲ್ಲದೆ ಕೊಲ್ಲ, ಪತ್ತನಂತಿಟ್ಟ, ಆಲಪ್ಪುಳ ಜಿಲ್ಲೆಗಳಲ್ಲೂ ರಜೆ ಘೋಶಿಸಲಾ|ಗಿದೆ.
ಮುಂದಿನ ಸೂಚನೆ ನೀಡುವವರೆಗೆ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ. ಅತಿ ತುರ್ತು ಸಂದರ್ಭಗಳಲ್ಲಿ ಪೋಲೀಸರು, ಅಗ್ನಿಶಾಮಕದಳ ಸಜ್ಜುಗೊಂಡಿರಬೇಕೆಂದು ಸೂಚಿಸಲಾಗಿದೆ. ಅಧಿಕೃತರ ಸೂಚನೆಗಳನ್ನು ಸಾರ್ವಜನಿಕರು ಪಾಲಿಸಬೇಕೆಂದು ಸರ್ಕಾರ ಮನವಿ ಮಾಡಿದೆ.