ಅಟ್ಟಿಂಗಲ್: ಮಹಿಳಾ ಉದ್ಯೋಗಿಗಳ ವಾಟ್ಸಾಪ್ ಗ್ರೂಪ್‍ನಲ್ಲಿ ಒಳ ಉಡುಪುಗಳ ವಿಡಿಯೋ ಶೇರ್ ಮಾಡಿದ ಕೆ ಎಸ್ ಆರ್ ಟಿ ಸಿ ಚಾಲಕನನ್ನು ಅಮಾನತು ಮಾಡಲಾಗಿದೆ. ತಿರುವನಂತಪುರ ಸೆಂಟ್ರಲ್ ಡಿಪೆÇೀದಲ್ಲಿ ಕೆಲಸ ಮಾಡುತ್ತಿರುವ ಎಂ ಸಾಬು ಅವರನ್ನು ಮುಂದಿನ ತನಿಖೆಗಾಗಿ ಅಮಾನತುಗೊಳಿಸಲಾಗಿದೆ. ಕಳೆದ ಸೆಪ್ಟೆಂಬರ್‍ನಲ್ಲಿ ನಡೆದ ಘಟನೆಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಸಾಬು ಹಂಗಾಮಿ ಉದ್ಯೋಗಿಯಾಗಿದ್ದು, ಅಟ್ಟಿಂಗಲ್ ಡಿಪೆÇೀದಿಂದ ತಿರುವನಂತಪುರಕ್ಕೆ ವರ್ಕಿಂಗ್ ಅರೇಂಜ್ಮೆಂಟ್ ಆಧಾರದ ಮೇಲೆ ವರ್ಗಾವಣೆಗೊಂಡಿದ್ದಾರೆ. ನೆಡುಮಂಗಡ ಇನ್ಸ್ ಪೆಕ್ಟರ್ ಬಿ ಗಿರೀಶ್ ಘಟನೆಯ ತನಿಖೆ ನಡೆಸಿ ವರದಿ ನೀಡಿದ ನಂತರ ಅಮಾನತು ಮಾಡಲಾಗಿದೆ. ಹೆಚ್ಚುವರಿ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರಿ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಾಬು ವಿರುದ್ಧ ಪೋಲೀಸರಿಗೆ ದೂರು ನೀಡಲಾಗಿದೆ. ಮಾನ್ಯತೆ ಪಡೆದ ಸಂಸ್ಥೆಯೊಂದರ ವಾಟ್ಸಾಪ್ ಗ್ರೂಪ್‍ನಲ್ಲಿ ಸಾಬು ಅವರು ಒಳಉಡುಪು ಬದಲಾಯಿಸುತ್ತಿರುವ ಸೆಲ್ಫಿಗಳನ್ನು ಹಂಚಿಕೊಂಡಿದ್ದಾರೆ. ಈ ಗುಂಪಿನಲ್ಲಿ ಸುಮಾರು 35 ಮಹಿಳಾ ಉದ್ಯೋಗಿಗಳೂ ಇದ್ದಾರೆ. ಮನೆಯಲ್ಲೇ ವಿಡಿಯೋ ಶೂಟ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಸಾಬು ಅವರ ಈ ಕ್ರಮವು ನೌಕರರ ಕುಟುಂಬಗಳಲ್ಲಿ ತಿರಸ್ಕಾರವನ್ನು ಉಂಟುಮಾಡಿದೆ ಮತ್ತು ಅನೇಕ ಉದ್ಯೋಗಿಗಳು ತಮ್ಮ ಮಕ್ಕಳಿಗೆ ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಪೋನ್ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ. ಪೋಲೀಸರಿಗೆ ದೂರು ನೀಡಿದ ನಂತರ ಸಾಬು ವಿರುದ್ಧ ಮುಂದಿನ ಕ್ರಮ ಸಾಧ್ಯವೇ ಎಂಬುದು ಸ್ಪಷ್ಟವಾಗಿಲ್ಲ.