ಜಿನೀವಾ: ಅತೀ ವೇಗವಾಗಿ ರೂಪಾಂತರಗೊಂಡ ಓಮಿಕ್ರಾನ್ ಕೊರೊನಾ ವೈರಸ್ ರೂಪಾಂತರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡುವ ಸಾಧ್ಯತೆಯಿದೆ. ಕೆಲವು ದೇಶಗಳಿಗೆ ಇದು ಹೆಚ್ಚು ಅಪಾಯವನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಸೋಮವಾರ ಹೇಳಿದೆ.
ಒಮಿಕ್ರಾನ್ ಸೋಂಕಿನಿಂದ ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ. ಆದ್ರೆ ಲಸಿಕೆ ಇದರ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆಯೇ, ಇದು ನಮಗೆ ರಕ್ಷಣೆ ನೀಡುತ್ತದೆಯೇ ಎಂಬುದನ್ನು ಅರಿಯಲು ಸಂಶೋಧನೆಯ ಅಗತ್ಯವಿದೆ ಎಂದು ಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕಳೆದ ವಾರ ಮೊದಲ ಒಮಿಕ್ರಾನ್ ಪ್ರಕರಣ ವರದಿಯಾಯಿತು. ಅಲ್ಲಿಂದ ಇಲ್ಲಿಯವರೆಗೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಿಶ್ವ ಸಂಸ್ಥೆಯು ತನ್ನ 194 ಸದಸ್ಯ ರಾಷ್ಟ್ರಗಳಿಗೆ ವ್ಯಾಕ್ಸಿನೇಷನ್ನನ್ನು ವೇಗಗೊಳಿಸಲು ಮತ್ತು ಆರೋಗ್ಯ ಸೇವೆಗಳನ್ನು ನೀಡಲು ಯೋಜನೆಗಳನ್ನು ಜಾರಿಗೊಳಿಸಿ ಎಂದು ಒತ್ತಾಯಿಸಿದೆ.
ಓಮಿಕ್ರೋನ್ ರೂಪಾಂತರಿ ವ್ಯಕ್ತಿ ಪ್ರತಿರಕ್ಷಣಾ ಸಾಮರ್ಥ್ಯದಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಡೆಲ್ಟಾದಿಂದಲೂ ಅತಿ ಹೆಚ್ಚು ವೇಗವಾಗಿ ಹರಬಡಲ್ಲುದು. ಜಾಗತಿಕ ಮಟ್ಟದಲ್ಲಿ ಹೆಚ್ಚು ಹರಡುವ ಸಂಭವನೀಯತೆ ಇದೆ. ಹಾಗಾಗಿ, ತೀವ್ರ ಪರಿಣಾಮ ಉಂಟಾಗಬಹುದು ಎಂದು ಮುನ್ಸೂಚನೆ ಕೊಟ್ಟಿದೆ. ಹೊಸ ರೂಪಾಂತರಕ್ಕೆ ಸಂಬಂಧಿಸಿದಂತೆ ಒಟ್ಟಾರೆ ಜಾಗತಿಕ ಅಪಾಯ ಅತಿ ಹೆಚ್ಚು ಎಂದು ವಿಶ್ವ ಸಂಸ್ಥೆ ಹೇಳಿದೆ.
ಕೋವಿಡ್ ರೂಪಾಂತರಿ ತಳಿ ಒಮಿಕ್ರೋನ್ ಹರಡುವಿಕೆ ಸಾಮರ್ಥ್ಯದ ಬಗ್ಗೆ ಹೆಚ್ಚಿನ ನಿಖರತೆ ಇಲ್ಲ. ಆದರೆ, ಅದು ಅತಿ ಹೆಚ್ಚು ಅಪಾಯ ಉಂಟುಮಾಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಹೇಳಿದ್ದಾರೆ.
ಒಮಿಕ್ರಾನ್ ಪ್ರಕರಣ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್ 24 ರಂದು ವರದಿಯಾಗಿದೆ. ಅಲ್ಲಿ ಸೋಂಕುಗಳು ತೀವ್ರವಾಗಿ ಏರಿಕೆಯಾಗಿವೆ. ಅಂದಿನಿಂದ ಇದು 12ಕ್ಕೂ ಹೆಚ್ಚು ದೇಶಗಳಿಗೆ ಇದು ಹರಡಿದೆ.