ಮಥುರಾ: ಪಬ್‍ಜಿ ಗೇಮ್ ಆಡುತ್ತಾ ರೈಲ್ವೆ ಹಳಿ ಮೇಲೆ ಕುಳಿತಿದ್ದ ಬಾಲಕರ ಮೇಲೆ ರೈಲು ಹರಿದಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ.
ಲಕ್ಷ್ಮೀನಗರ ಪ್ರದೇಶದಲ್ಲಿ ಘಟನೆ ನಡೆದಿದೆ. 10ನೇ ತರಗತಿಯ ವಿದ್ಯಾರ್ಥಿಗಳಾದ 18 ವರ್ಷದ ಕಪಿಲ್ ಮತ್ತು 16 ವರ್ಷದ ರಾಹುಲ್ ಇಬ್ಬರೂ ಬೆಳಿಗ್ಗೆ ವಾಕಿಂಗ್‌ಗೆ ಹೋಗಿದ್ದರು. ತದ ನಂತರ ಅವರು ತಮ್ಮ ಮೊಬೈಲ್‌ನಲ್ಲಿ ಗೇಮ್ ಆಡುವುದರಲ್ಲಿ ತೊಡಗಿದ್ದರು ಎಂದು ಜಮುನಾ ಪಾರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ತಿಳಿಸಿದ್ದಾರೆ.
ಮಥುರಾ ಕಂಟೋನ್ಮೆಂಟ್ ಮತ್ತು ರಾಯಾ ನಿಲ್ದಾಣಗಳ ನಡುವಿನ ಅಪಘಾತ ಸ್ಥಳದಲ್ಲಿ ಎರಡೂ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.
ಒಂದು ಹಾನಿಗೊಳಗಾಗಿದ್ದರೆ, ಮತ್ತೊಂದರಲ್ಲಿ ಆಟ ನಡೆಯುತ್ತಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇಬ್ಬರು ಬಾಲಕರ ಮೇಲೆ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿಲ್ಲ ಎಂದು ಮಥುರಾ ಕಂಟೋನ್ಮೆಂಟ್ ಜಿಆರ್‌ಪಿ ಇನ್‌ಸ್ಪೆಕ್ಟರ್ ಡಿ ಕೆ ದ್ವಿವೇದಿ ಹೇಳಿದ್ದಾರೆ.