ನ್ಯೂಯಾರ್ಕ್: World Of The Year - ಕರೋನಾ ಯುಗದಲ್ಲಿ ನಮಗೆಲ್ಲರಿಗೂ ಹೆಚ್ಚು ಬೇಕಾಗಿರುವ ಸಂಗತಿ ಎಂದರೆ ಅದು ಕರೋನಾ ವಿರುದ್ಧ ಹೋರಾಡುವ ಲಸಿಕೆ (Vaccine) . ಆದರೆ ಇದೀಗ ವಿಶ್ವದ ಎಲ್ಲಾ ದೇಶಗಳಲ್ಲಿ ಅನೇಕ ಲಸಿಕೆಗಳನ್ನು ಸಿದ್ಧಪಡಿಸಲಾಗಿದೆ ಮತ್ತು ಜೀವಗಳನ್ನು ಉಳಿಸುವ ಕೆಲಸ ನಡೆಯುತ್ತಿದೆ. 2021 ರ ವರ್ಷಕ್ಕೆ, 'ಮೆರಿಯಮ್ ವೆಬ್‌ಸ್ಟರ್' (Merriam Webster) ನಿಘಂಟು 'ಲಸಿಕೆ' ಅನ್ನು ವರ್ಷದ ಪದವಾಗಿ (Word of the Year) ಆಯ್ಕೆ ಮಾಡಿದೆ.
ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ
'ಮೆರಿಯಮ್ ವೆಬ್‌ಸ್ಟರ್' ನ ಸಂಪಾದಕ ಪೀಟರ್ ಸೊಕೊಲೊಸ್ಕಿ, '2021 ರಲ್ಲಿ, ಈ ಪದವು ನಮ್ಮೆಲ್ಲರ ಜೀವನದಲ್ಲಿ ಹೆಚ್ಚಾಗಿ ಬಳಕೆಯಾಗಿದೆ. ಇದು ಎರಡು ವಿಭಿನ್ನ ಕಥೆಗಳನ್ನು ಹೇಳುತ್ತದೆ. ಮೊದಲನೆಯ ಕಥೆ ವಿಜ್ಞಾನಕ್ಕೆ ಸಂಬಂಧಿಸಿದ್ದಾಗಿದ್ದು, ಇದು ಲಸಿಕೆ ತಯಾರಿಕೆಯ ಗಮನಾರ್ಹ ವೇಗವನ್ನು ವಿವರಿಸುತ್ತದೆ. ಇದರ ಜೊತೆಗೆ ನೀತಿ, ರಾಜಕೀಯ ಮತ್ತು ರಾಜಕೀಯ ಸಂಬಂಧದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದು ಎರಡನೆಯ ದೊಡ್ಡ ಕಥೆಗಳನ್ನು ಹೇಳುವ ಒಂದು ಪದವಾಗಿದೆ ಎಂದಿದ್ದಾರೆ.
'ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟನ್ನು (Oxford English Dictionary) ' ಪ್ರಕಟಿಸಿದ ಜನರು 'ವ್ಯಾಕ್ಸ್' ಅನ್ನು ವರ್ಷದ ಪದವಾಗಿ ಆಯ್ಕೆ ಮಾಡಿದ್ದರೆ. ಇದೇ ವೇಳೆ 'ಮೆರಿಯಮ್-ವೆಬ್‌ಸ್ಟರ್' ಕಳೆದ ವರ್ಷ ತನ್ನ ಆನ್‌ಲೈನ್ ಸೈಟ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ 'ಪಾಂಡೆಮಿಕ್' (Pandemic) ಪದವನ್ನು ಆಯ್ಕೆ ಮಾಡಿತ್ತು. 'ಸಾಂಕ್ರಾಮಿಕ' ಪದ ಇದೀಗ ಹಿಂದೆ ಬೀಳುತ್ತಿದ್ದು ಮತ್ತು ನಾವು ಈಗ ಅದರ ಪರಿಣಾಮಗಳನ್ನು ನೋಡುತ್ತಿದ್ದೇವೆ ಎಂದು ಸೊಕೊಲೊಸ್ಕಿ ಹೇಳಿದ್ದಾರೆ.