ತಿರುವನಂತಪುರ: ರಾಜ್ಯದಲ್ಲಿ ಒಮಿಕ್ರಾನ್ ರೋಗಿಗಳ ಸಂಖ್ಯೆ 100 ದಾಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇಂದು 44 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಅವರಲ್ಲಿ ಏಳು ಮಂದಿ ಸಂಪರ್ಕದಿಂದ ರೋಗಕ್ಕೆ ತುತ್ತಾಗಿದ್ದಾರೆ. ಇದು ಕೇರಳದಲ್ಲಿ ಒಮಿಕ್ರಾನ್ ರೋಗಿಗಳ ಒಟ್ಟು ಸಂಖ್ಯೆಯನ್ನು 107 ಕ್ಕೆ ಹೆಚ್ಚಿಸಿದೆ.
ಒಮಿಕ್ರಾನ್‍ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವರು ಹೇಳಿದರು. ಒಟ್ಟು 12 ಜಿಲ್ಲೆಗಳಲ್ಲಿ ರೋಗ ದೃಢಪಟ್ಟಿದೆ. ಎರ್ನಾಕುಳಂ 12, ಕೊಲ್ಲಂ 10, ತಿರುವನಂತಪುರ 8, ತ್ರಿಶೂರ್ 4, ಕೊಟ್ಟಾಯಂ, ಪಾಲಕ್ಕಾಡ್, ಮಲಪ್ಪುರಂ, ಕಣ್ಣೂರು ತಲಾ 2, ಅಲಪ್ಪುಳ ಮತ್ತು ಇಡುಕ್ಕಿ ತಲಾ 1 ಒಮಿಕ್ರಾನ್ ಹೊಸದಾಗಿ ದೃಢಪಟ್ಟಿದೆ. ಈ ಪೈಕಿ 10 ಹೈ ರಿಸ್ಕ್ ದೇಶಗಳಿಂದ ಮತ್ತು 27 ಮಂದಿ ಕಡಿಮೆ ಅಪಾಯದ ದೇಶಗಳಿಂದ ಬಂದವರು. ಕೊಲ್ಲಂ 4, ಕೊಟ್ಟಾಯಂ 2 ಮತ್ತು ತಿರುವನಂತಪುರ 1 ಸಂಪರ್ಕದಿಂದ ಸೋಂಕು ಬಾಧಿಸಿದೆ.
ಎರ್ನಾಕುಳಂನಲ್ಲಿ ಯುಎಇಯಿಂದ 4, ಯುಕೆಯಿಂದ 3, ಕತಾರ್‍ನಿಂದ 2 ಮತ್ತು ದಕ್ಷಿಣ ಆಫ್ರಿಕಾ, ಇಸ್ರೇಲ್ ಮತ್ತು ಮಾಲ್ಟಾದಿಂದ ತಲಾ ಒಬ್ಬರು. ಕೊಲ್ಲಂನಲ್ಲಿ, 5 ಜನರು ಯುಎಇಯಿಂದ ಆಗಮಿಸಿದವರು ಮತ್ತು ಒಬ್ಬರು ಪೂರ್ವ ಆಫ್ರಿಕಾದಿಂದ ಬಂದವರು. ತಿರುವನಂತಪುರಂನಲ್ಲಿ 6 ಮಂದಿ ಜನರು ಯುಎಇ ಮತ್ತು ಒಬ್ಬರು ಕತಾರ್‍ನಿಂದ ಬಂದವರು. ತ್ರಿಶೂರ್‍ನಲ್ಲಿ ಯುಎಇಯಿಂದ 3 ಮತ್ತು ಯುಕೆಯಿಂದ ಬಂದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಪಾಲಕ್ಕಾಡ್ ನಲ್ಲಿ ನೈಜೀರಿಯಾ ಮತ್ತು ಯುಎಇ, ಮಲಪ್ಪುರಂ ಯುಕೆ ಮತ್ತು ಸ್ಪೇನ್ ನಿಂದ ಬಂದ ಒಬ್ಬೊಬ್ಬರಂತೆ ಹಾಗೂ ಕಣ್ಣೂರಿನಲ್ಲಿ ಸ್ವೀಡನ್ ಮತ್ತು ಯುಎಇ, ಆಲಪ್ಪುಳ ಇಟಲಿ ಮತ್ತು ಇಡುಕ್ಕಿಯಲ್ಲಿ ಸ್ವೀಡನ್‍ನಿಂದ ಬಂದ ಒಬ್ಬೊಬ್ಬರಿಗೆ ಓಮಿಕ್ರಾನ್ ಬಾಧಿಸಿದೆ.
ಒಮಿಕ್ರಾನ್ ಒಟ್ಟು 107 ಜನರರಲ್ಲಿ ದೃಢಪಡಿಸಿದೆ. ಅದರಲ್ಲಿ 41 ಹೆಚ್ಚಿನ ಅಪಾಯದ ದೇಶಗಳಿಂದ ಮತ್ತು 52 ಮಂದಿ ಕಡಿಮೆ ಅಪಾಯದ ದೇಶಗಳಿಂದ ಬಂದವರು. ಒಟ್ಟು 14 ಜನರಿಗೆ ಸಂಪರ್ಕದ ಮೂಲಕ ರೋಗ ಪತ್ತೆಯಾಗಿದೆ. ಯುಎಇಯಿಂದ ಬಂದವರಲ್ಲಿ ಹೆಚ್ಚು ಸೋಂಕು ಪತ್ತೆಯಾಗಿದೆ. 29 ಮಂದಿ ಯುಎಇಯಿಂದ ಬಂದವರು. ಎರ್ನಾಕುಳಂ 37, ತಿರುವನಂತಪುರ 26, ಕೊಲ್ಲಂ 11, ತ್ರಿಶೂರ್ 9, ಪತ್ತನಂತಿಟ್ಟ 5, ಆಲಪ್ಪುಳ 5, ಕಣ್ಣೂರು 4, ಕೊಟ್ಟಾಯಂ 3, ಮಲಪ್ಪುರಂ 3, ಪಾಲಕ್ಕಾಡ್ 2, ಕೋಝಿಕ್ಕೋಡ್ 1 ಮತ್ತು ಇಡುಕ್ಕಿ 1 ಎಂಬಂತೆ ಒಮಿಕ್ರಾನ್ ದೃಢಪಟ್ಟಿದೆ.