ನವದೆಹಲಿ: ಕಳೆದ ಏಳುವರ್ಷಗಳ ಅವಧಿಯಲ್ಲಿ ಬ್ಯಾಂಕುಗಳು ಒಟ್ಟು 10.7 ಲಕ್ಷ ಕೋಟಿ ರೂಪಾಯಿ ಅನುತ್ಪಾದಕ ಆಸ್ತಿ (ಎನ್ಪಿಎ)ಯನ್ನು ರೈಟ್ ಆಫ್ (ವಸೂಲಿ ಆಗದೆ ಲೆಕ್ಕಪುಸ್ತಕಕ್ಕೆ ಸೀಮಿತ) ಮಾಡಿದೆ. ಕಳೆದ ವರ್ಷ 2,02,781 ಕೋಟಿ ರೂಪಾಯಿ ಇದೆ ರೀತಿ ರೈಟ್ ಆಫ್ ಆಗಿತ್ತು.

ಷೇರುಪೇಟೆ ಕುಸಿತ: ಅಮೆರಿಕದ ಫೆಡರಲ್ ಬ್ಯಾಂಕ್ ನೀತಿಗೆ ಮುಂದಾಗಿ ಭಾರತದ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರ ಕುಸಿತ ದಾಖಲಿಸಿದೆ. ಬುಧವಾರ 329.06 ಅಂಶ ಕುಸಿದು 57,788.03ರಲ್ಲಿ ನಿಫ್ಟಿ 103.50 ಅಂಶ ಕುಸಿದು 17,221.40 ಅಂಶದಲ್ಲಿ ದಿನದ ವಹಿವಾಟು ಕೊನೆಗೊಳಿಸಿವೆ. ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ 44 ಪೈಸೆ ಅಪಮೌಲ್ಯ ಕಂಡಿದ್ದು 76.32 ರೂಪಾಯಿ ಆಗಿದೆ. ಕಳೆದ 20 ತಿಂಗಳಲ್ಲಿ ಇದು ಹೆಚ್ಚಿನ ಕುಸಿತವಾಗಿದೆ.
ದೆಹಲಿ ಚಿನಿವಾರ ಪೇಟೆಯಲ್ಲಿ ಬಂಗಾರದ ಧಾರಣೆ 297 ರೂ. ಇಳಿಕೆ ಆಗಿದ್ದು, 10 ಗ್ರಾಂನ ಬೆಲೆ 47,019 ರೂ.ಗೆ ತಗ್ಗಿದೆ. ಬೆಳ್ಳಿ ಬೆಲೆ 556 ರೂ. ಕುಗ್ಗಿದ್ದು, ಕೆಜಿ ದರ 59,569 ರೂ.ಗೆ ಇಳಿಕೆ ಆಗಿದೆ.