HEALTH TIPS

ಒಮಿಕ್ರಾನ್​ ವಕ್ಕರಿಸುತ್ತಿದ್ದಂತೆ ಈ ಗ್ರಾಮದಲ್ಲಿ 10 ದಿನಗಳ ಕಾಲ ಸ್ವಯಂ ಲಾಕ್​ಡೌನ್​ ಘೋಷಣೆ!

            ಹೈದರಾಬಾದ್​: ವಿಶ್ವದೆಲ್ಲೆಡೆ ಕರೊನಾ ರೂಪಾಂತರಿ ಒಮಿಕ್ರಾನ್​ ಭೀತಿ ಆವರಿಸಿದೆ. ಡೆಲ್ಟಾ ರೂಪಾಂತರಿಗಿಂತ ಒಮಿಕ್ರಾನ್​ ವೇಗವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಚೀನಾ ಲಾಕ್​ಡೌನ್​ನಂತಹ ಕ್ರಮ ಕೈಗೊಂಡಿದೆ. ಭಾರತದಲ್ಲೂ ದಿನದಿಂದ ದಿನಕ್ಕೆ ಒಮಿಕ್ರಾನ್​ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರ ನಿಯಂತ್ರಣದ ಬಗ್ಗೆ ನಿನ್ನೆಯಷ್ಟೇ(ಡಿ.23) ಪ್ರಧಾನಿ ಮೋದಿ ಸಭೆ ನಡೆಸಿದ್ದಾರೆ,

         ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ಇದೇ ರೀತಿಯಲ್ಲಿ ಹೆಚ್ಚಾಗುತ್ತಾ ಹೋದರೆ ದೇಶದಲ್ಲೂ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಾಗುವ ಎಲ್ಲ ಸಾಧ್ಯತೆಗಳಿವೆ.

            ಇದರ ನಡುವೆ ತೆಲಂಗಾಣದ ಗ್ರಾಮವೊಂದು ಸರ್ಕಾರಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ 10 ದಿನಗಳ ಸ್ವಯಂ ಲಾಕ್​ಡೌನ್ ಹೇರಿಕೊಂಡಿದೆ. ಅದಕ್ಕೆ ಕಾರಣ 2021ರ ಡಿಸೆಂಬರ್​ 21ರಂದು ದುಬೈನಿಂದ ಗ್ರಾಮಕ್ಕೆ ಬಂದ ಯುವಕನೊಬ್ಬನಿಗೆ ಒಮಿಕ್ರಾನ್​ ಸೋಂಕು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮವು ಸ್ವಯಂ ಲಾಕ್​ಡೌನ್​ ಘೋಷಿಸಿದೆ.

           ಯುವಕನಿಗೆ ಒಮಿಕ್ರಾನ್​ ಸೋಂಕು ದೃಢವಾದ ಬೆನ್ನಲ್ಲೇ ಆತನನ್ನು ಹೈದರಾಬಾದ್​ನ ಕಿಮ್ಸ್​ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆತನ ಸಂಪರ್ಕಕ್ಕೆ ಬಂದ ಕುಟುಂಬ ಸದಸ್ಯರು, ಆಪ್ತರು ಮತ್ತು ಬಂಧು ಬಳಗದವರು ತಮ್ಮಷ್ಟಕ್ಕೆ ತಾವೇ ಐಸೋಲೆಟ್​ ಆಗಿ ಎಂದು ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

            ಡಿ. 21ರಂದು ದುಬೈನಿಂದ ರಾಜಣ್ಣ ಸಿರ್ಸಿಲ್ಲ ಜಿಲ್ಲೆಯ ಮುಸ್ತಾಬಾದ್​ ಮಂಡಲದ ಗುಡೇಮ್​ ಗ್ರಾಮಕ್ಕೆ ಆಗಮಿಸಿದ ಯುವಕ ಯೆಲ್ಲರೆಡ್ಡಿಪೇಟೆ ಮತ್ತು ಸಿರ್ಸಿಲ್ಲ ಪಟ್ಟಣದಲ್ಲಿರುವ ತಮ್ಮ ಸಂಬಂಧಿಕರನ್ನು ಹಾಗೂ ಸ್ನೇಹಿತರನ್ನು ಭೇಟಿ ಮಾಡಿದ್ದಾನೆಂದು ಮಾಹಿತಿ ತಿಳಿದುಬಂದಿದೆ. ಆತನಿಗೆ ಸೋಂಕು ಇರುವುದು ಪತ್ತೆಯಾಗುತ್ತಿದ್ದಂತೆ ಗುಡೇಮ್​ ಗ್ರಾಮ 10 ದಿನಗಳ ಕಾಲ ಲಾಕ್​ಡೌನ್​ ಘೋಷಿಸಿದೆ. ಗುರುವಾರದಿಂದಲೇ ಲಾಕ್​ಡೌನ್​ ಆರಂಭವಾಗಿದೆ.

          ಗುಡೆಮ್​ ಪಂಚಾಯಿತಿ ಸದಸ್ಯ ಶ್ರೀನಿವಾಸ ರಾವ್ ಮಾತನಾಡಿ, ಯುವಕನ ಪತ್ನಿ ಮತ್ತು ತಾಯಿಗೂ ಸಹ ಕೋವಿಡ್‌ ಪಾಸಿಟಿವ್​ ಬಂದಿದೆ. ಆದರೆ, ಅವರು ಒಮಿಕ್ರಾನ್‌ ಸೋಂಕಿಗೆ ಒಳಗಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತಾದ ಫಲಿತಾಂಶ ಇನ್ನೂ ಬಂದಿಲ್ಲ ಎಂದು ತಿಳಿಸಿದ್ದಾರೆ.

           ವೈದ್ಯಕೀಯ ಅಧಿಕಾರಿಗಳು ಗುಡೇಮ್​ ಗ್ರಾಮದ 64 ಮಾದರಿಗಳನ್ನು ಸಂಗ್ರಹಿಸಿದ್ದಾರೆ ಮತ್ತು ಯುವಕರು ಮದುವೆಗೆ ಹಾಜರಾಗಿದ್ದ ಯಲ್ಲರೆಡ್ಡಿಪೇಟೆ ಮಂಡಲದ ನಾರಾಯಣಪುರದಿಂದ ಇನ್ನೂ 53 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಎಲ್ಲ ಅಂಗಡಿ ಮುಂಗಟ್ಟುಗಳು ಹಾಗೂ ಇತರೆ ವ್ಯಾಪಾರ ಸಂಸ್ಥೆಗಳನ್ನು ಮುಚ್ಚಲಾಗಿದ್ದು, ಗ್ರಾಮಸ್ಥರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪಂಚಾಯಿತಿ ಸದಸ್ಯರ ಶ್ರೀನಿವಾಸ್​ ರಾವ್​ ತಿಳಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries