ಪೆರ್ಲ: ಬೆದ್ರಂಪಳ್ಳದ ನ್ಯೂಸ್ಟಾರ್ ಆಟ್ರ್ಸ ಎಂಡ್ ಸ್ಪೋಟ್ರ್ಸ್ ಕ್ಲಬ್ಬ್ ನ ಹತ್ತನೇ ವರ್ಷಾಚರಣೆ ಸಂಭ್ರಮವು ಡಿ. 26ರಂದು ಬೆದ್ರಂಪಳ್ಳದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಈ ಸಂದರ್ಭದಲ್ಲಿ ಬಡ ವಧು ವರರ ಸರ್ವ ಧರ್ಮ ಸಾಮೂಹಿಕ ವಿವಾಹ ಸಹಾಯ ಹಾಗೂ ವೈದ್ಯಕೀಯ ಶಿಬಿರ, ವಿವಿಧ ಜಾತಿ,ಧರ್ಮ, ಮತ ಮೈತ್ರಿ ಸಂಗಮ ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ನ್ಯೂಸ್ಟಾರ್ ಆಟ್ರ್ಸ ಎಂಡ್ ಸ್ಪೋಟ್ರ್ಸ್ ಕ್ಲಬ್ಬ್ ನ ಅಧ್ಯಕ್ಷ ರಸಾಕ್ ಧ್ವಜಾರೋಹಣಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 10ಗಂಟೆಯಿಂದ ಬೆದ್ರಂಪಳ್ಳ ಶಾಲೆಯಲ್ಲಿ ನಡೆಯುವ ವೈದ್ಯಕೀಯ ಶಿಬಿರವನ್ನು ಮಾಜಿ ಪಂ.ಸದಸ್ಯ ಚನಿಯಪ್ಪ ಪೂಜಾರಿ ಉದ್ಘಾಟಿಸುವರು. ಎಣ್ಮಕಜೆ ಗ್ರಾ.ಪಂ.ಸದಸ್ಯ ರಾಧಾಕೃಷ್ಣ ನಾಯಕ್ ಜೆ.ಎಸ್. ಸಭೆಯ ಅಧ್ಯಕ್ಷತೆ ವಹಿಸುವರು.
ಸಂಜೆ 3 ಗಂಟೆಗೆ ಆರಂಭಗೊಳ್ಳುವ ಮತ ಮೈತ್ರಿ ಸಂಗಮದ ಸಭಾ ಕಾರ್ಯಕ್ರಮವನ್ನು ಕೇರಳ ಸರ್ಕಾರದ ಪ್ರಾಚ್ಯ ವಸ್ತು ಸಂಗ್ರಾಹಲಯ ಹಾಗೂ ಪುರಾತತ್ವ ಇಲಾಖಾ ಸಚಿವ ಆಹಮ್ಮದ್ ದೇವರ್ ಕೋವಿಲ್ ಉದ್ಘಾಟಿಸುವರು. ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಸಭೆಯ ಅಧ್ಯಕ್ಷತೆವಹಿಸುವರು. ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ, ಫಾದರ್ ಜೋಸ್ ಚೆಂಬೊಟ್ಟಿಕಲ್, ಉಸ್ತಾದ್ ಇಬ್ರಾಹಿಂ ಕಲೀಲ್ ಹುದಾವಿ ಆಲ್ ಮಲಿಕ್ ಧರ್ಮ ಸಂದೇಶ ನೀಡುವರು. ಉದುಮ ಶಾಸಕ ಸಿ.ಎಚ್.ಕುಂಞಂಬು, ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ , ಅಬುದಾಭಿಯ ಝಯದ್ ಫೌಂಡೇಶನ್ ಸೀನಿಯರ್ ಫಿನಾನ್ಸ್ ಕಂಟ್ರೋಲರ್ ಅಬ್ದುಲ್ಲ ಮಾದುಮೂಲೆ ಮುಖ್ಯ ಅತಿಥಿಗಳಾಗಿರುವರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಬದಿಯಡ್ಕ ಪೋಲಿಸ್ ಠಾಣಾಧಿಕಾರಿ ಅಶ್ವಥ್ ಎಸ್, ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಪ್ರಾಂಶುಪಾಲ ಪ್ರೊ.ಮುಹಮ್ಮದಾಲಿ, ಎಣ್ಮಕಜೆ ಗ್ರಾ.ಪಂ.ಸದಸ್ಯ ರಾಧಾಕೃಷ್ಣ ನಾಯಕ್ ಜೆ.ಎಸ್, ಪುತ್ತಿಗೆ ಗ್ರಾ.ಪಂ.ಸದಸ್ಯ ಮಜೀದ್, ಪಂ.ಸದಸ್ಯೆ ರೂಪವಾಣಿ ಆರ್.ಭಟ್, ಐಎನ್ ಎಲ್ ರಾಜ್ಯ ಉಪಾಧ್ಯಕ್ಷ ಕೆ.ಎಸ್.ಪಕ್ರುದ್ದೀನ್ ಹಾಜಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಶ್ರೀಕಾಂತ್, ಸಿಪಿಐಎಂ ಎಣ್ಮಕಜೆ ಲೋಕಲ್ ಸಮಿತಿ ಕಾರ್ಯದರ್ಶಿ ವಿನೋದ್ ವಿ, ಯು.ಎ.ಇ.ಮಾಜಿ ಅಧ್ಯಕ್ಷ ವೈ.ಸುಧೀರ್ ಕುಮಾರ್ ಶೆಟ್ಟಿ, ಸಿಪಿಐಎಂ ಬೆದ್ರಂಪಳ್ಳ ಬ್ರಾಂಚ್ ಸಮಿತಿ ಕಾರ್ಯದರ್ಶಿ ಅಬ್ದುಲ್ಲ ಕುಂಞÂ್ಞ ಎನ್, ಎ.ಎಲ್ ಪಿ.ಎಸ್.ಬೆದ್ರಂಪಳ್ಳ ಶಾಲಾ ಮುಖ್ಯೋಪಾಧ್ಯಾಯ ಮಹೇಶ್ ಕುಮಾರ್, ಪತ್ರಕರ್ತ ಎ.ಬಿ.ಕುಟ್ಟಿಯಾನಂ, ಸಮಾಜ ಸೇವಕ ಖೈಯುಂ ಮಾನ್ಯ, ಅಂಗಡಿಮೊಗರು ಸರ್ಕಾರಿ ಶಾಲಾ ಶಿಕ್ಷಕ ಅಬ್ದುಲ್ ರಹಿಮಾನ್ ಮಾಸ್ತರ್,ಎಣ್ಮಕಜೆ ಪಂ.ಮಾಜಿ ಉಪಾಧ್ಯಕ್ಷೆ ಆಯಿಷಾ ಎ.ಎ, ಬೆದ್ರಂಪಳ್ಳ ಗಣೇಶ ಮಂದಿರ ಕಾರ್ಯದರ್ಶಿ ಶ್ರೀಧರ ಮಾಸ್ತರ್, ಬೆದ್ರಂಪಳ್ಳ ಜಮಾಯತ್ ಅಧ್ಯಕ್ಷ ಹಮೀದ್ ಹಾಜಿ, ಮಣಿಯಂಪಾರೆ ಕೆಥೋಲಿಕ್ ಸಭಾಧ್ಯಕ್ಷ ರಾಜು ಜೋನ್ ಡಿ.ಸೋಜ, ರಾಜರಾಮ ಪೆರ್ಲ ಮೊದಲಾದವರು ಶುಭಾಶಂಸನೆಗೈಯುವರು. ರಾತ್ರಿ 7.30 ರಿಂದ ಎಸ್.ಎಸ್.ಆರ್ಕೇಸ್ಟ್ರ ಪಯ್ಯನ್ನೂರು ಇವರಿಂದ "ಸಂಗೀತ ಹಾಸ್ಯ ಸಂಧ್ಯಾ" ಎಂಬ ಸಾಂಸ್ಕøತಿಕ ಕಾರ್ಯಕ್ರಮ ಜರಗಲಿದೆ.