ಪೆರ್ಲ: ಬೆದ್ರಂಪಳ್ಳದ ನ್ಯೂಸ್ಟಾರ್ ಆಟ್ರ್ಸ್ ಎಂಡ್ ಸ್ಪೋಟ್ರ್ಸ್ ಕ್ಲಬ್ಬ್ ನ ಹತ್ತನೇ ವರ್ಷಾಚರಣೆ ಸಂಭ್ರಮವು ಬೆದ್ರಂಪಳ್ಳದಲ್ಲಿ ಸಾಮೂಹಿಕ ವಿವಾಹ,ವೈದ್ಯಕೀಯ ಶಿಬಿರ,ಮತ ಮೈತ್ರಿ ಸಂಗಮ,ಪ್ರತಿಭಾ ಪುರಸ್ಕಾರ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿದ್ದು ಇತಿಹಾಸ ಸೃಷ್ಠಿಸಿತು.
ಇದರ ಅಂಗವಾಗಿ ನಡೆದ ಮತ ಮೈತ್ರಿ ಸಂಗಮದ ಸಭಾ ಕಾರ್ಯಕ್ರಮವನ್ನು ಕೇರಳ ಸರ್ಕಾರದ ಪ್ರಾಚ್ಯ ವಸ್ತು ಸಂಗ್ರಾಹಲಯ ಹಾಗೂ ಪುರಾತತ್ವ ಇಲಾಖಾ ಸಚಿವ ಆಹಮ್ಮದ್ ದೇವರ್ ಕೋವಿಲ್ ಉದ್ಘಾಟಿಸಿ ಮಾತನಾಡಿ, ನಾಡಿನ ಮತ ಸೌಹರ್ದತೆಯನ್ನು ಸಂರಕ್ಷಿಸುವಲ್ಲಿ ಸಂಘಟನಾ ಮೌಲ್ಯವನ್ನು ಎತ್ತಿ ಹಿಡಿದ ಮಾದರಿ ಕಾರ್ಯಕ್ರಮ ಇದಾಗಿದೆ. ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಮುನ್ನಡೆಸುವಂತಹ ಮತ ಪಂಡಿತರ ಮೂಲಕ ಧರ್ಮ ಸಂದೇಶದ ಜತೆಗೆ ನಾಡಿನ ಪ್ರಗತಿಗೆ ನೀಡಿದ ಈ ಕಾರ್ಯಕ್ರಮದ ಕೊಡುಗೆ ಅನನ್ಯ ಎಂದರು.
ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಫಾದರ್ ಜೋಸ್ ಚೆಂಬೊಟ್ಟಿಕಲ್, ಉಸ್ತಾದ್ ಇಬ್ರಾಹಿಂ ಕಲೀಲ್ ಹುದಾವಿ ಆಲ್ ಮಲಿಕ್ ಧರ್ಮ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಣ ಕ್ರಾಂತಿ ಸೃಷ್ಠಿಸಿ ಪದ್ಮಶ್ರೀ ಪುರಸ್ಕøತರಾದ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಅಬುದಾಭಿಯ ಝಯದ್ ಫೌಂಡೇಶನ್ ಸೀನಿಯರ್ ಫಿನಾನ್ಸ್ ಕಂಟ್ರೋಲರ್ ಅಬ್ದುಲ್ಲ ಮಾದುಮೂಲೆ ಮುಖ್ಯ ಅತಿಥಿಗಳಾಗಿದ್ದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಬದಿಯಡ್ಕ ಪೋಲಿಸ್ ಠಾಣಾಧಿಕಾರಿ ವಿನೋದ್, ಎಣ್ಮಕಜೆ ಗ್ರಾ.ಪಂ.ಸದಸ್ಯ ರಾಧಾಕೃಷ್ಣ ನಾಯಕ್ ಜೆ.ಎಸ್, ಪುತ್ತಿಗೆ ಗ್ರಾ.ಪಂ.ಸದಸ್ಯ ಮಜೀದ್, ಪಂ.ಸದಸ್ಯೆ ರೂಪವಾಣಿ ಆರ್.ಭಟ್, ಐಎನ್ ಎಲ್ ರಾಜ್ಯ ಉಪಾಧ್ಯಕ್ಷ ಕೆ.ಎಸ್.ಪಕ್ರುದ್ದೀನ್ ಹಾಜಿ,ಮಾಜಿ ಜಿ.ಪಂ.ಸದಸ್ಯ ಶಂಕರ ರೈ ಮಾಸ್ತರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಶ್ರೀಕಾಂತ್, ಸಿಪಿಐಎಂ ಮುಖಂಡ ಅವಿನಾಶ್ ಸಿ.ಎಚ್, ಸಿಪಿಐಎಂ ಬೆದ್ರಂಪಳ್ಳ ಬ್ರಾಂಚ್ ಸಮಿತಿ ಕಾರ್ಯದರ್ಶಿ ಅಬ್ದುಲ್ಲ ಕುಂಞÂ್ಞ ಎನ್, ಎ.ಎಲ್ ಪಿ.ಎಸ್.ಬೆದ್ರಂಪಳ್ಳ ಶಾಲಾ ಮುಖ್ಯೋಪಾಧ್ಯಾಯ ಮಹೇಶ್ ಕುಮಾರ್, ಸಮಾಜ ಸೇವಕ ಖೈಯುಂ ಮಾನ್ಯ, ಅಂಗಡಿಮೊಗರು ಸÀರ್ಕಾರಿ ಶಾಲಾ ಶಿಕ್ಷಕ ಅಬ್ದುಲ್ ರಹಿಮಾನ್ ಮಾಸ್ತರ್, ಎಣ್ಮಕಜೆ ಪಂ.ಮಾಜಿ ಉಪಾಧ್ಯಕ್ಷೆ ಆಯಿಷಾ ಎ.ಎ, ಬೆÉದ್ರಂಪಳ್ಳ ಗಣೇಶ ಮಂದಿರ ಕಾರ್ಯದರ್ಶಿ ಶ್ರೀಧರ ಮಾಸ್ತರ್, ಬೆದ್ರಂಪಳ್ಳ ಜಮಾಯತ್ ಅಧ್ಯಕ್ಷ ಹಮೀದ್ ಹಾಜಿ, ಮಣಿಯಂಪಾರೆ ಕೆಥೋಲಿಕ್ ಸಭಾಧ್ಯಕ್ಷ ರಾಜು ಜೋನ್ ಡಿ.ಸೋಜ, ರಾಜರಾಮ ಪೆರ್ಲ ಮೊದಲಾದವರು ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಎಸ್ಸಸೆಲ್ಸಿ ಹಾಗೂ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕ್ಲಬ್ಬಿನ ಪ್ರಧಾನ ಕಾರ್ಯದರ್ಶಿ ಮೆಹ್ತಾಬ್ ಹಸನ್ ಸ್ವಾಗತಿಸಿ, ಉಪಾಧ್ಯಕ್ಷ ಸಮದ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಎಸ್.ಎಸ್.ಆರ್ಕೇಸ್ಟ್ರ ಪಯ್ಯನ್ನೂರು ಇವರಿಂದ "ಸಂಗೀತ ಹಾಸ್ಯ ಸಂಧ್ಯಾ" ಎಂಬ ಕಾರ್ಯಕ್ರಮ ಜರಗಿತು.