ಕಾಸರಗೋಡು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೇತೃತ್ವದಲ್ಲಿ ಕಾಸರಗೋಡು ಮತ್ತು ಹೊಸದುರ್ಗ ನ್ಯಾಯಾಲಯ ಕೇಂದ್ರಗಳಲ್ಲಿ ಡಿ.11ರಂದು ಲೋಕ್ ಅದಾಲತ್ ನಡೆಯಲಿದೆ. ಈ ಸಂಬಂಧ ಪ್ರೀಟಾಕ್ ನವೆಂಬರ್ ತಿಂಗಳಲ್ಲಿ ಆರಂಭಿಸಲಾಗಿದೆ. ನೆಗೋಷೆಯೇಬಲ್ ಇನ್ಟ್ರುಮೆಂಟ್ ಆಕ್ಟ್ ಸೆಕ್ಷನ್ 138 ಪ್ರಕಾರದ ಕೇಸುಗಳು, ನೌಕರಿ ವಿವಾದಗಳು, ವಿದ್ಯುತ್ ದರ ಸಂಬಂಧ ದೂರುಗಳು, ಮೈಂಟೆನೆನ್ಸ್ ಕೇಸುಗಳು, ಮಾತುಕತೆ ಮೂಲಕ ಬಗೆಹರಿಸಬಹುದಾದ ಕ್ರಿಮಿನಲ್ ಕೇಸುಗಳು ಇತ್ಯಾದಿಗಳನ್ನು ಅದಾಲತ್ ನಲ್ಲಿ ಪರಿಶೀಲಿಸಲಾಗುವುದು. ವಿವಿಧ ನ್ಯಾಯಾಲಯಗಳಲ್ಲಿ ಸದ್ರಿ ಮಾತುಕತೆ ಮೂಲಕ ಬಗೆಹರಿಸಬಹುದಾದ ಕ್ರಿಮಿನಲ್ ಕೇಸುಗಳು, ಮೋಟಾರು ವಾಹನ ನಷ್ಟಪರಿಹಾರ, ಚೆಕ್ ಕೇಸುಗಳು, ಲೇಬರ್ ನ್ಯಾಯಾಲಯದ ಕೇಸುಗಳು, ಭೂ ಸಂಬಂಧ ಕೇಸುಗಳು, ಸರ್ವೀಸ್ ಸಂಬಂಧ ಕೇಸುಗಳು, ಕೇರಳ ಅಂಟುರೋಗ ನಿಯಂತ್ರಣ ಕಾಯಿದೆ ಕೇಸುಗಳು, ಪೆಟ್ಟಿ ಕೇಸುಗಳು , ಸಿವಿಲ್ ನ್ಯಾಯಾಲಯಗಳಲ್ಲಿರುವ ಕೇಸುಗಳು ಇತರ್ಯಾದಿಗಳನ್ನೂ ಅದಾಲತ್ ನಲ್ಲಿ ಪರಿಶೀಲಿಸಲಾಗುವುದು, ಹೆಚ್ಚುವರಿ ಮಾಹಿತಿಗಳಿಗಾಗಿ ಹೊಸದುರ್ಗ ನ್ಯಾಯಾಲಯ: 0467-2207170, 04994-256189.