ಕ್ಯಾಂಡಿ ಎನ್ನುವ ಮಹಿಳೆ ದೂರು ನೀಡಿದಾಕೆ. ಆಕೆ ಈ ಹಿಂದೆ ಟಿಕ್ ಟಾಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಆ ಸಂದರ್ಭ ಟಿಕ್ ಟಾಕ್ ನಲ್ಲಿ ಅಪ್ಲೋಡ್ ಆಗುವ ವಿಡಿಯೊಗಳಲ್ಲಿ ಆಕ್ಷೇಪಾರ್ಹವಾದ ವಿಡಿಯೋಗಳಿಗೆ ನಿರ್ಬಂಧ ಹೇರುವ ಕೆಲಸ ಆಕೆಯದು. ಅದಕ್ಕಾಗಿ ಆಕೆ ಟಿಕ್ ಟಾಕ್ ವಿಡಿಯೋಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕಿತ್ತು.
ದಿನದ 12 ಗಂಟೆಗಳ ಕಾಲ ಟಿಕ್ ಟಾಕ್ ವಿಡಿಯೊಗಳನ್ನು ಸತತವಾಗಿ ನೋಡಬೇಕಿತ್ತು. ಟಿಕ್ ಟಾಕ್ ಗೆ ಜಗತ್ತಿನಾದ್ಯಂತ ಎಷ್ಟು ವಿಡಿಯೊಗಳು ಅಪ್ ಲೋಡ್ ಆಗುತ್ತಿದ್ದವೆಂದರೆ ಏಕಕಾಲಕ್ಕೆ ಎರಡು ಮೂರು ವಿಡಿಯೋಗಳನ್ನು ಆಕೆಯಂತೆ ಅನೇಕ ಉದ್ಯೋಗಿಗಳು ನೋಡಬೇಕಿತ್ತು. ಈ ಸಂದರ್ಭ ಆಕೆಯ ಮಾನಸಿಕ ಆರೋಗ್ಯ ಹದಗೆಟ್ಟಿದ್ದಾಗಿ ಕ್ಯಾಂಡಿ ತಿಳಿಸಿದ್ದಾರೆ.