ಮಧೂರು: ಪಾರೆಕಟ್ಟೆಯ ರಂಗ ಕುಟೀರ ಕಾಸರಗೋಡು ನೇತೃತ್ವದಲ್ಲಿ ರಂಗೋತ್ಸವ ಸಮಾರಂಭ ಡಿ.12 ರಂದು ಅಪರಾಹ್ನ 2 ರಿಂದ ಕಾಸರಗೋಡು ಮುನ್ಸಿಪಲ್ ಕಾನ್ಪರೆನ್ಸ್ ಸಭಾಂಗಣದಲ್ಲಿ ನಡೆಯಲಿದೆ.
ರಂಗ ಕುಟೀರದ ನಿರ್ದೇಶಕ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಹಿರಿಯ ಸಾಹಿತಿ ಸುಕನ್ಯ ಮಾರುತಿ ಉದ್ಘಾಟಿಸುವರು. ಹಿರಿಯ ರಂಗನಟ ದೇವರಾಜ್ ಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಬಿ., ಸಾಣೇಹಳ್ಳಿಯ ರಂಗಸಹಾಸ ಟ್ರಸ್ಟ್ ಕಾರ್ಯದರ್ಶಿ ಕೆ.ಮಲ್ಲಯ್ಯ ಶ್ರೀಮಠ ಉಪಸ್ಥಿತರಿರುವರು. ಈ ಸಂದರ್ಭ ದಿ.ಡಾ.ಸಿದ್ದಲಿಂಗಯ್ಯ ಸ್ಮಾರಕ ಪ್ರಶಸ್ತಿಯನ್ನು ಚಲನಚಿತ್ರ ಹಿನ್ನೆಲೆ ಗಾಯಕ ರಮೇಶ್ ಚಂದ್ರ ಅವರಿಗೆ ಪ್ರದಾನ ಮಾಡಲಾಗುವುದು. ಉದುಮ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಪ್ರಶಸ್ತಿ ಪ್ರದಾನ ಮಾಡುವರು.
ಈ ಸಂzರ್ಭ ನೃತ್ಯ ವೈವಿಧ್ಯ, ಕೂಚುಪುಡಿ ನೃತ್ಯ, ಸುಗಮ ಸಂಗೀತ, ನಾ ಸತ್ತಾಗ ಕನ್ನಡ ರಂಗ ನಾಟಕದ ಪ್ರದಶರ್Àನ ನಡೆಯಲಿದೆ.